ಎಸ್‌ಐಪಿ ಹೂಡಿಕೆ ಮಾಡುವುದರಲ್ಲಿ 2 ವರ್ಷಗಳ ವಿಳಂಬ ಮಾಡಿದರೆ ನಿಮಗೆ ಎಷ್ಟು ಹೊರೆಯಾಗಬಹುದು

ಎಸ್‌ಐಪಿ ಹೂಡಿಕೆ ಮಾಡುವುದರಲ್ಲಿ 2 ವರ್ಷಗಳ ವಿಳಂಬ ಮಾಡಿದರೆ ನಿಮಗೆ ಎಷ್ಟು ಹೊರೆಯಾಗಬಹುದು zoom-icon

ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡುವುದು, ಅದರಲ್ಲೂ ನೀವು ಹೊಸಬರಾಗಿದ್ದರೆ ತುಂಬಾ ಪ್ರಚೋದನಕಾರಿಯಾಗಿರಬಹುದು. ಆದರೆ, ಕೆಲವು ಪ್ರಯೋಗಿಸಿ ಯಶಸ್ವಿಯಾದ ಹೂಡಿಕೆ ವಿಧಾನಗಳಿವೆ. ಇವು ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡುವುದನ್ನು ಸರಳ ಮತ್ತು ಸುಲಭಗೊಳಿಸುತ್ತವೆ. ಅಷ್ಟೇ ಅಲ್ಲ, ದೀರ್ಘಕಾಲದವರೆಗೆ ಸಂಪತ್ತು ರಚನೆಗೆ ನೆರವಾಗಬಹುದು. ಅವುಗಳೆಂದರೆ ಎಸ್‌ಐಪಿಗಳು ಅಥವಾ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್‌ಗಳು. 

ನಿಗದಿತ ಅಂತರದಲ್ಲಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಸಣ್ಣ ಮೊತ್ತವನ್ನು ಹೂಡಿಕೆ ಮಾಡಲು ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್‌ಗಳು (ಎಸ್‌ಐಪಿಗಳು) ನಿಮಗೆ ಅನುವು ಮಾಡುತ್ತವೆ. ನಿಯತವಾಗಿ ಸಣ್ಣ ಮೊತ್ತವನ್ನು ಇದರಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಹಣಕಾಸಿನ ಗುರಿಗಳನ್ನು ಸಾಧಿಸಲು ಸಂಚಯದ ಶಕ್ತಿಯನ್ನು ಬಳಸಿಕೊಳ್ಳಲು ಎಸ್‌ಐಪಿ ನಿಮಗೆ ನೆರವು ನೀಡುತ್ತದೆ. 

ಮ್ಯೂಚುವಲ್ ಫಂಡ್‌ ಸ್ಕೀಮ್‌ಗಳಲ್ಲಿ ಪ್ರತಿ ತಿಂಗಳು ಹೂಡಿಕೆ ಮಾಡುವ ಸಣ್ಣ ಮೊತ್ತವು ಕಾಲಾನಂತರದಲ್ಲಿ ಗಮನಾರ್ಹ ಹೂಡಿಕೆ ಪೋರ್ಟ್‌ಫೋಲಿಯೋ ಆಗಿ ಬೆಳೆಯುವ ಸಾಧ್ಯತೆಯನ್ನು ಹೊಂದಿರುತ್ತದೆ. ಕಿರಿಕಿರಿ ರಹಿತ ಮತ್ತು ಶಿಸ್ತುಬದ್ಧವಾದ ಹೂಡಿಕೆ ವಿಧಾನವನ್ನು ಹುಡುಕುತ್ತಿರುವವರಿಗೆ ಎಸ್‌ಐಪಿಗಳು ಉತ್ತಮ ಹೂಡಿಕೆ ಆಯ್ಕೆಯಾಗಿದೆ. ಉತ್ಪನ್ನ/ಸ್ಕೀಮ್‌ ನಿಮಗೆ ಹೊಂದುತ್ತದೆಯೇ ಎಂಬ ಬಗ್ಗೆ ನಿಮಗೆ ಖಚಿತವಿಲ್ಲದಿದ್ದರೆ, ಮ್ಯೂಚುವಲ್ ಫಂಡ್ ಪರಿಣಿತರ ಮಾರ್ಗದರ್ಶನವನ್ನು ಪಡೆಯುವುದು ಸೂಕ್ತ.

ಸಾಮಾನ್ಯವಾಗಿ, ಎಸ್‌ಐಪಿ ಅಥವಾ ಮ್ಯೂಚುವಲ್ ಫಂಡ್‌ಗಳು ತುಂಬಾ ಸಂಕೀರ್ಣ ಎಂಬ ಕಾರಣಕ್ಕೆ ಜನರು ಇದನ್ನು ದೂರವಿಡುತ್ತಾರೆ. ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಕಷ್ಟವಾಗಿರುತ್ತದೆ. ಹೀಗಾಗಿ, ಅವರು ಹೂಡಿಕೆ ಮಾಡುವುದಿಲ್ಲ. 

ಆದರೆ, ಹೂಡಿಕೆ ಮಾಡುವುದರಲ್ಲಿ ವಿಳಂಬ ಮಾಡಿದಷ್ಟೂ ನಿಮಗೆ ಭಾರಿ ಹೊರೆಯಾಗುತ್ತದೆ! ಎಸ್‌ಐಪಿಯಲ್ಲಿ ತಿಂಗಳಿಗೆ ನೀವು ಬರಿ 1,000 ರೂ. ಹೊಂದಿದ್ದರೂ, ಎರಡು ವರ್ಷಗಳವರೆಗೆ ವಿಳಂಬ ಮಾಡಿದರೆ ನಿಮಗೆ ಭಾರಿ ಹೊರೆಯಾಗುತ್ತದೆ! 

ನಂಬಿಕೆ ಬರುತ್ತಿಲ್ಲವೇ? ಸಂಖ್ಯೆಗಳಲ್ಲಿ ಇದನ್ನು ನೋಡೋಣ! 

25ನೇ ವರ್ಷದಲ್ಲಿ ನೀವು ಈಕ್ವಿಟಿ ಎಸ್‌ಐಪಿ ಒಂದರಲ್ಲಿ ರೂ. 1,000 ಹೂಡಿಕೆ ಮಾಡಲು ಬಯಸಿದ್ದೀರಿ, ಇದು ವಾರ್ಷಿಕವಾಗಿ 12% ರಿಟರ್ನ್‌ ನೀಡುತ್ತದೆ ಎಂದು ಊಹಿಸೋಣ. ಇದರಲ್ಲಿ ನೀವು 30 ವರ್ಷಗಳವರೆಗೆ ಹೂಡಿಕೆ ಮಾಡುವ ಯೋಜನೆ ಹಾಕಿಕೊಂಡಿದ್ದೀರಿ. ಯಾವುದೋ ಕಾರಣಕ್ಕೆ, ಎರಡು ವರ್ಷಗಳ ನಂತರ ಯೋಜನೆ ಆರಂಭಿಸಲು ನೀವು ನಿರ್ಧಾರ ಮಾಡುತ್ತೀರಿ. ನಿಮ್ಮ ಹೂಡಿಕೆ ವ್ಯಾಪ್ತಿಯು ಆಗ 28 ವರ್ಷಗಳಿಗೆ ಮಿತಿಯಾಗುತ್ತದೆ. ನೀವು ಪಡೆಯಬಹುದಾದ ಸಂಭಾವ್ಯ ರಿಟರ್ನ್‌ಗಳನ್ನು ಈ ಕೆಳಗಿನ ಕೋಷ್ಟಕವು ತೋರಿಸುತ್ತದೆ. ಈ ರಿಟರ್ನ್‌ಗಳು ರಿಸ್ಕ್‌ಗಳಿಗೆ ಒಳಪಟ್ಟಿದೆ ಎಂಬುದನ್ನು ಅರಿತಿರುವುದು ಅತ್ಯಂತ ಮುಖ್ಯ:
 

ವಿವರಗಳು

25ನೇ ವರ್ಷದಲ್ಲಿ ಆರಂಭ

27 ರಲ್ಲಿ ಆರಂಭ

ಹೂಡಿಕೆ ವಲಯ

30

28

ಪ್ರತಿ ತಿಂಗಳು ಹೂಡಿಕೆ ಮಾಡಿದ ಮೊತ್ತ

Rs 1,000

Rs 1,000

ಹೂಡಿಕೆಯ ಮೇಲೆ ಊಹಿಸಿದ ರಿಟರ್ನ್‌

12%

12%

ಹೂಡಿಕೆ ಮಾಡಿದ ಮೊತ್ತ

Rs 3,60,000

Rs 3,36,000

ರಿಟರ್ನ್‌ಗಳ ಜೊತೆಗೆ ಒಟ್ಟು ಸಂಚಯಗೊಂಡ ಮೊತ್ತ

Rs 35,29,914

Rs 27,58,585

ವಿಳಂಬವಾಗಿ ಹೂಡಿಕೆ ಮಾಡಿದ್ದಕ್ಕೆ ಆದ ನಷ್ಟ

-

Rs 7,71,329

*ಈ ಮೇಲಿನ ಲೆಕ್ಕಾಚಾರಗಳು ಚಿತ್ರಣ ಉದ್ದೇಶಕ್ಕೆ ಮಾತ್ರ ಮತ್ತು ಇವು ರಿಸ್ಕ್‌ಗಳಿಗೆ ಒಳಪಟ್ಟಿವೆ.

ಅಷ್ಟು ದೀರ್ಘ ಅವಧಿಗೆ ಡೆಟ್‌ ಫಂಡ್‌ನಲ್ಲಿ ಎಸ್‌ಐಪಿ ಸಾಧ್ಯತೆ ಅನುಮಾನವಾಗಿದೆ. ಹೀಗಾಗಿ, ಹೈಬ್ರಿಡ್ ಫಂಡ್ ಅನ್ನು ಪರಿಗಣಿಸಬಹುದು.
ಇಲ್ಲಿ ನೀವೇ ನೋಡಬಹುದಾದ ಹಾಗೆ, ಕೇವಲ ಎರಡು ವರ್ಷಗಳ ವಿಳಂಬವು 7 ಲಕ್ಷಕ್ಕೂ ಹೆಚ್ಚು ನಷ್ಟವನ್ನು ಉಂಟು ಮಾಡಿದೆ! ಈಗ, ವಾರ್ಷಿಕ 10% ಸರಾಸರಿ ರಿಟರ್ನ್‌ನಲ್ಲಿ ಹೈಬ್ರಿಡ್ ಫಂಡ್‌ನಲ್ಲಿ ಹೂಡಿಕೆ ಮಾಡಿದ್ದರೂ ಕೂಡ, ಹೂಡಿಕೆ ವಿಳಂಬ ವೆಚ್ಚವು ಲಕ್ಷಗಳಲ್ಲಿ ಇರುತ್ತದೆ . 
 

ವಿವರಗಳು

25ನೇ ವರ್ಷದಲ್ಲಿ ಆರಂಭ

27ನೇ ವರ್ಷದಲ್ಲಿ ಆರಂಭ

ಹೂಡಿಕೆ ವಲಯ

30

28

ಪ್ರತಿ ತಿಂಗಳು ಹೂಡಿಕೆ ಮಾಡಿದ ಮೊತ್ತ

Rs 1,000

Rs 1,000

ಹೂಡಿಕೆಯ ಮೇಲೆ ಊಹಿಸಿದ ರಿಟರ್ನ್‌

10%

10%

ಹೂಡಿಕೆ ಮಾಡಿದ ಮೊತ್ತ

Rs 3,60,000

Rs 3,36,000

ರಿಟರ್ನ್‌ಗಳ ಜೊತೆಗೆ ಸಂಚಯಗೊಳಿಸಿದ ಒಟ್ಟು ಮೊತ್ತ

Rs 22,79,325

Rs 18,45,849

ವಿಳಂಬ ಹೂಡಿಕೆಯ ವೆಚ್ಚ

-

Rs 4,33,476

*ಈ ಮೇಲಿನ ಲೆಕ್ಕಾಚಾರಗಳು ಚಿತ್ರಣ ಉದ್ದೇಶಕ್ಕೆ ಮಾತ್ರ ಮತ್ತು ಇವು ರಿಸ್ಕ್‌ಗಳಿಗೆ ಒಳಪಟ್ಟಿವೆ.

ಸಂಚಯದ ಶಕ್ತಿ

ಸಂಚಯದ ಶಕ್ತಿ ಎಂಬುದು ಹೂಡಿಕೆಯಲ್ಲಿ ಒಂದು ಬಲವಾಗಿದ್ದು, ಇದು ನಿಮ್ಮ ಅಸಲಿನ ಹೂಡಿಕೆಯ ಮೇಲೆ ಮತ್ತು ಸಂಚಯಗೊಳಿಸಿದ ಬಡ್ಡಿಯ ಮೇಲೆ ಬಡ್ಡಿ ಗಳಿಸಲು ಅನುವು ಮಾಡುತ್ತದೆ. ಅಂದರೆ, ಕಾಲಾನಂತರದಲ್ಲಿ ನಿಮ್ಮ ಗಳಿಕೆಯು ವರ್ಧಿತ ದರದಲ್ಲಿ ಬೆಳೆಯುವ ಸಾಧ್ಯತೆಯನ್ನು ಹೊಂದಿರುತ್ತದೆ. ಇದು ನಿಮಗೆ ನಿಮ್ಮ ಹೂಡಿಕೆಯ ಮೇಲೆ ಗಮನಾರ್ಹ ರಿಟರ್ನ್‌ ಪಡೆಯುವುದಕ್ಕೆ ಅನುವು ಮಾಡಬಹುದು.

ನೀವು ಬೇಗನೆ ಪ್ರಾರಂಭಿಸಿದರೆ, ಸಂಯೋಜನೆಯ ಪರಿಣಾಮವು ಹೆಚ್ಚು ಶಕ್ತಿಯುತವಾಗಿರುತ್ತದೆ, ನಿಮ್ಮ ಹಣಕಾಸಿನ ಗುರಿಗಳನ್ನು ಸುಲಭವಾಗಿ ಪೂರೈಸಲು ಸಹಾಯ ಮಾಡುತ್ತದೆ. ಮೇಲಿನ ಉದಾಹರಣೆಗಳು ವಿವರಿಸಿದಂತೆ, ಕೇವಲ ಎರಡು ವರ್ಷಗಳ ವಿಳಂಬವು ವಿಳಂಬವಾದ ಹೂಡಿಕೆಗಳ ದೊಡ್ಡ ವೆಚ್ಚವನ್ನು ಹೊಂದಿರಬಹುದು.

ಇದೇ ಕಾರಣಕ್ಕೆ ನೀವು ಶೀಘ್ರ ಹೂಡಿಕೆಯನ್ನು ಆರಂಭ ಮಾಡಬೇಕು. ತಿಂಗಳಲ್ಲಿ ರೂ. 1,000 ಹೂಡಿಕೆ ಮಾಡಿದರೂ ಕೂಡ, ಹೂಡಿಕೆ ಮಾಡುವುದಕ್ಕೆ ನಿಮಗೆ ಉತ್ತಮ ಮ್ಯೂಚುವಲ್‌ ಫಂಡ್‌ ಆಯ್ಕೆ ಮಾಡಿಕೊಳ್ಳಬೇಕು.

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸುಲಭ ಮತ್ತು ಕಿರಿಕಿರಿ ರಹಿತವಾದ ವಿಧಾನ. ಪ್ರತಿ ತಿಂಗಳು ಹೂಡಿಕೆ ಮಾಡುವ ಚಿಂತೆ ಇಲ್ಲದೇ ನೀವು ಹೂಡಿಕೆಗಳನ್ನು ಆನ್‌ಲೈನ್‌ನಲ್ಲಿ ಆಟೊಮೇಟ್ ಮಾಡಬಹುದು.

ತೀರ್ಮಾನ

ನಿಮಗೆ ಗೊತ್ತಿರುವ ಹಾಗೆ, ನಿಧಾನವಾಗಿ ಮತ್ತು ಸುಸ್ಥಿರವಾಗಿ ಓಡಿದರೆ ರೇಸ್‌ನಲ್ಲಿ ಗೆಲ್ಲಬಹುದು. ನೀವು ಸಣ್ಣ ಮೊತ್ತದ ಹೂಡಿಕೆ ಮಾಡಿದರೂ, ಇಂದೇ ಹೂಡಿಕೆ ಆರಂಭಿಸಿ. ನಿಮ್ಮ ಭವಿಷ್ಯವನ್ನು ಆರ್ಥಿಕವಾಗಿ ಸುಭದ್ರಗೊಳಿಸಿಕೊಳ್ಳಿ.

ಹಕ್ಕು ನಿರಾಕರಣೆ

ಮ್ಯೂಚುವಲ್ ಫಂಡ್ ಯೋಜನೆಗಳ ವಿವಿಧ ವರ್ಗಗಳ ಬಗ್ಗೆ ಎಎಂಎಫ್ಐ (AMFI) ವೆಬ್ ಸೈಟ್ ನಲ್ಲಿ ಪ್ರಸಾರವಾದ ಮಾಹಿತಿಯು ಮ್ಯೂಚುವಲ್ ಫಂಡ್ ಗಳ ಬಗ್ಗೆ ಜಾಗೃತಿ ಮೂಡಿಸಲು ಹಣಕಾಸು ಉತ್ಪನ್ನ ವರ್ಗವಾಗಿ ಜಾಗೃತಿ ಮೂಡಿಸಲು ಹೊರತು ಮಾರಾಟ ಪ್ರಚಾರ ಅಥವಾ ವ್ಯವಹಾರದ ಕೋರಿಕೆಗಾಗಿ ಅಲ್ಲ. 

ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ, ಆಂತರಿಕ ಮೂಲಗಳು ಮತ್ತು ವಿಶ್ವಾಸಾರ್ಹವೆಂದು ನಂಬಲಾದ ಇತರ ಮೂರನೇ ಪಕ್ಷದ ಮೂಲಗಳ ಆಧಾರದ ಮೇಲೆ ಎಎಂಎಫ್ಐ ನಲ್ಲಿನ ವಿಷಯವನ್ನು ಸಿದ್ಧಪಡಿಸಿದೆ. ಆದಾಗ್ಯೂ, ಅಂತಹ ಮಾಹಿತಿಯ ನಿಖರತೆಯನ್ನು ಎಎಂಎಫ್ಐ ಖಾತರಿಪಡಿಸುವುದಿಲ್ಲ, ಅದರ ಸಂಪೂರ್ಣತೆಯನ್ನು ಖಾತರಿಪಡಿಸುವುದಿಲ್ಲ, ಅಥವಾ ಅಂತಹ ಮಾಹಿತಿಯನ್ನು ಬದಲಾಯಿಸಲಾಗುವುದಿಲ್ಲ ಎಂದು ಖಾತರಿಪಡಿಸುವುದಿಲ್ಲ. 

ಇಲ್ಲಿರುವ ವಿಷಯವು ವೈಯಕ್ತಿಕ ಹೂಡಿಕೆದಾರರ ಉದ್ದೇಶಗಳು, ಅಪಾಯದ ಸಾಧ್ಯತೆ ಅಥವಾ ಹಣಕಾಸಿನ ಅಗತ್ಯಗಳು ಅಥವಾ ಸಂದರ್ಭಗಳು ಅಥವಾ ಇಲ್ಲಿ ವಿವರಿಸಿದ ಮ್ಯೂಚುವಲ್ ಫಂಡ್ ಉತ್ಪನ್ನಗಳ ಸೂಕ್ತತೆಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ, ಹೂಡಿಕೆದಾರರು ಈ ನಿಟ್ಟಿನಲ್ಲಿ ಹೂಡಿಕೆ ಸಲಹೆಗಾಗಿ ತಮ್ಮ ವೃತ್ತಿಪರ ಹೂಡಿಕೆ ಸಲಹೆಗಾರ/ ಸಮಾಲೋಚಕ/ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಲು ಸೂಚಿಸಲಾಗಿದೆ. 

ಮ್ಯೂಚುವಲ್ ಫಂಡ್ ಯೋಜನೆಯು ಠೇವಣಿ ಉತ್ಪನ್ನವಲ್ಲ ಮತ್ತು ಇದು ಮ್ಯೂಚುವಲ್ ಫಂಡ್ ಅಥವಾ ಅದರ ಎಎಂಸಿ (AMC) ಯಿಂದ ಬಾಧ್ಯತೆ ಅಥವಾ ಖಾತರಿ ಅಥವಾ ವಿಮೆಯಾಗಿಲ್ಲ. ಅಂತರ್ಗತ ಹೂಡಿಕೆಗಳ ಸ್ವರೂಪದಿಂದಾಗಿ, ಮ್ಯೂಚುವಲ್ ಫಂಡ್ ಉತ್ಪನ್ನದ ಆದಾಯ ಅಥವಾ ಸಂಭಾವ್ಯ ಆದಾಯವನ್ನು ಖಾತರಿಪಡಿಸಲಾಗುವುದಿಲ್ಲ. ಐತಿಹಾಸಿಕ ಕಾರ್ಯಕ್ಷಮತೆಯನ್ನು ಪ್ರಸ್ತುತಪಡಿಸಿದಾಗ, ಸಂಪೂರ್ಣವಾಗಿ ಉಲ್ಲೇಖ ಉದ್ದೇಶಗಳಿಗಾಗಿ ಮತ್ತು ಭವಿಷ್ಯದ ಫಲಿತಾಂಶಗಳ ಖಾತರಿಯಲ್ಲ.

ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.

 

286

ಮ್ಯೂಚುವಲ್‌ ಫಂಡ್‌ ಸೂಕ್ತವೇ??