ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆಗೆ ಸೂಕ್ತ ಕಾಲಾವಧಿ ಬೇಕಾಗುತ್ತದೆ. ಸರಿಯಾದ ಕಾಲಾವಧಿಯನ್ನು ಹೊಂದಿದಾಗ ನಾವು ಉತ್ತಮ ನಿರೀಕ್ಷೆ ಮಾಡಬಹುದು. ಜೊತೆಗೆ ಹೂಡಿಕೆ ರಿಟರ್ನ್ಸ್ ಕೂಡ ಲಭ್ಯವಾಗುತ್ತದೆ. ಅಷ್ಟೇ ಅಲ್ಲ, ಹೂಡಿಕೆಯಲ್ಲಿ ರಿಸ್ಕ್ ಅನ್ನೂ ಕಡಿಮೆ ಮಾಡುತ್ತದೆ.
ಹಾಗಾದರೆ ನಾವು ಈಗ ಮಾತನಾಡುತ್ತಿರುವ ಈ ರಿಸ್ಕ್ ಎಂದರೆ ಏನು? ಸರಳವಾಗಿ ಹೇಳುವುದಾದರೆ, ಇದು ಹೂಡಿಕೆ ಕಾರ್ಯಕ್ಷಮತೆಯ ಅಸ್ಥಿರತೆ. ಅಷ್ಟೇ ಅಲ್ಲ, ಇದು ಹೂಡಿಕೆ ಬಂಡವಾಳ ಕಡಿಮೆಯಾಗುವ ಸಾಧ್ಯತೆಯೂ ಆಗಿದೆ. ದೀರ್ಘ ಕಾಲದವರೆಗೆ ಹೂಡಿಕೆ ಮಾಡಿದ್ದಾಗ ಕೆಲವು ವರ್ಷಗಳವರೆಗೆ ಕಡಿಮೆ ರಿಟರ್ನ್ಸ್ / ಋಣಾತ್ಮಕ ರಿಟರ್ನ್ಸ್ ಹಾಗೂ ಕೆಲವು ವರ್ಷಗಳವರೆಗೆ ಅತ್ಯುತ್ತಮ ರಿಟರ್ನ್ಸ್ ಎಲ್ಲ ಸೇರಿ ಒಂದು ಉತ್ತಮವಾದ ಸರಾಸರಿ ರಿಟರ್ನ್ಸ್ ಲಭ್ಯವಾಗುತ್ತದೆ. ಹೀಗಾಗಿ, ಹೂಡಿಕೆದಾರರು ವಿಪರೀತ ಬದಲಾಗುವ ರಿಟರ್ನ್ಸ್ ಅನ್ನು ಪ್ರತಿ ವರ್ಷ ಸರಾಸರಿ ಮಾಡಿ ದೀರ್ಘಕಾಲದಲ್ಲಿ ಹೆಚ್ಚು ಸ್ಥಿರವಾದ ರಿಟರ್ನ್ ಅನ್ನು ಪಡೆಯಬಹುದು.
ಶಿಫಾರಸು ಮಾಡಿದ ಕಾಲಾವಧಿಯು ಪ್ರತಿ ಸ್ವತ್ತು ವಿಭಾಗಕ್ಕೆ ಮತ್ತು ಮ್ಯೂಚುವಲ್ ಫಂಡ್ ವರ್ಗಕ್ಕೂ ವಿಭಿನ್ನವಾಗಿರುತ್ತದೆ. ಹೂಡಿಕೆ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ದಯವಿಟ್ಟು ಹಣಕಾಸು ತಜ್ಞರನ್ನು ಸಂಪರ್ಕಿಸಿ ಮತ್ತು ಸ್ಕೀಮ್ ಗೆ ಸಂಬಂಧಿಸಿದ ದಾಖಲೆಗಳನ್ನು ಓದಿ.