ನಿಮ್ಮ ಮ್ಯೂಚುವಲ್ ಫಂಡ್ ಪೋರ್ಟ್‌ಫೋಲಿಯೋವನ್ನು ಆರಂಭದಿಂದ ಹೇಗೆ ನಿರ್ಮಿಸುತ್ತೀರಿ?

ನಿಮ್ಮ ಮ್ಯೂಚುವಲ್ ಫಂಡ್ ಪೋರ್ಟ್‌ಫೋಲಿಯೋವನ್ನು ಆರಂಭದಿಂದ ಹೇಗೆ ನಿರ್ಮಿಸುತ್ತೀರಿ? zoom-icon

ಮ್ಯೂಚುವಲ್ ಫಂಡ್‌ಗಳು ಫ್ಲೆಕ್ಸಿಬಲ್ ಆದ ಹೂಡಿಕೆ ಆಯ್ಕೆಯಾಗಿದೆ. ಯಾಕೆಂದರೆ, ಅಸೆಟ್ ಕ್ಲಾಸ್, ರಿಸ್ಕ್‌ಗಳು, ಹೂಡಿಕೆ ಮೊತ್ತ ಮತ್ತು ದ್ರವ್ಯತೆ ವಿಷಯದಲ್ಲಿ ಇದು ವ್ಯಾಪಕವಾದ ಶ್ರೇಣಿಯನ್ನು ಇವು ಒದಗಿಸುತ್ತವೆ. ಆದರೆ, ಹೊಸಬರಿಗೆ ಮ್ಯೂಚುವಲ್ ಫಂಡ್ ಪೋರ್ಟ್‌ಫೋಲಿಯೋವನ್ನು ಮೊದಲ ಬಾರಿಗೆ ನಿರ್ಮಿಸಿಕೊಳ್ಳುವುದು ಸವಾಲಿನ ಕೆಲಸವಾಗಿರುತ್ತದೆ. ಕೆಲವು ಪ್ರಾಥಮಿಕ ಸಿದ್ಧಾಂತಗಳನ್ನು ಇಟ್ಟುಕೊಂಡು ನೀವು ನಿಮ್ಮ ಮ್ಯೂಚುವಲ್ ಪೋರ್ಟ್‌ಫೋಲಿಯೋವನ್ನು ಸೆಟಪ್ ಮಾಡಬಹುದಾಗಿದೆ. 

ನಿಮ್ಮ ಮ್ಯೂಚುವಲ್ ಫಂಡ್ ಪೋರ್ಟ್‌ಫೋಲಿಯೋವನ್ನು ನಿರ್ಮಿಸುವುದಕ್ಕೆ ಸಂಬಂಧಿಸಿದ ಪ್ರತಿ ಹಂತವನ್ನು ಒಳಗೊಂಡ ಮಾರ್ಗದರ್ಶಿ:

  • ನಿಮ್ಮ ರಿಸ್ಕ್ ಸಹಿಸಿಕೊಳ್ಳುವ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳಿ: ನಿಮ್ಮ ರಿಸ್ಕ್ ಸಹಿಸಿಕೊಳ್ಳುವ ಸಾಮರ್ಥ್ಯ ಎಂಬುದು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಾಗ ನೀವು ತೆಗೆದುಕೊಳ್ಳಲು ಸಮ್ಮತಿಸುವ ರಿಸ್ಕ್‌ನ ಮಟ್ಟವಾಗಿರುತ್ತದೆ. ನಿಮ್ಮ ಹೂಡಿಕೆಗಳಿಗೆ ಎಷ್ಟು ರಿಸ್ಕ್ ಅನ್ನು ನೀವು ತೆಗೆದುಕೊಳ್ಳಬಹುದು ಎಂದು ನಿರ್ಧಾರ ಮಾಡಿದ ನಂತರ, ನಿಮಗೆ ಸೂಕ್ತವಾದ ಫಂಡ್‌ಗಳ ವಿಧವನ್ನು ನೀವು ನಿರ್ಧಾರ ಮಾಡಬಹುದು. ಉದಾಹರಣೆಗೆ, ನೀವು ಅಧಿಕ ರಿಸ್ಕ್ ಸಹಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದರೆ, ಈಕ್ವಿಟಿಗಳಲ್ಲಿ ಗರಿಷ್ಠ ನಿಯೋಜನೆಯನ್ನು ಮಾಡಬಹುದು. ಕಡಿಮೆ ರಿಸ್ಕ್ ಸಹಿಸಿಕೊಳ್ಳುವ ಹೂಡಿಕೆದಾರರು ನೀವಾಗಿದ್ದರೆ ಡೆಟ್ ಫಂಡ್‌ಗಳು ಹೆಚ್ಚು ಸೂಕ್ತವಾಗಿರುತ್ತದೆ. 
  • ಗುರಿಗಳನ್ನು ಗುರುತಿಸುವುದು: ಗುರಿಗಳು ಅತ್ಯಂತ ಪ್ರಮುಖ ಅಂಶವಾಗಿದೆ. ಏಕೆಂದರೆ, ಎಲ್ಲ ಭವಿಷ್ಯದ ನಿರ್ಧಾರಗಳು ಅದಕ್ಕೆ ಆಧಾರವಾಗಿರುತ್ತವೆ. ಗುರಿಗಳ ಮೂಲಕ, ಹೂಡಿಕೆಯ ಮೊತ್ತ ಮತ್ತು ಅವಧಿಯನ್ನು ನೀವು ನಿರ್ಧಾರ ಮಾಡಬಹುದು. ಅಲ್ಲದೆ, ಹೂಡಿಕೆಯ ಹಲವು ಇತರ ಗುಣಲಕ್ಷಣಗಳನ್ನೂ ನೀವು ನಿರ್ಧಾರ ಮಾಡಬಹುದು. ಎಲ್ಲಕ್ಕಿಂತ ಹೆಚ್ಚಾಗಿ, ನಿಮ್ಮ ಗುರಿಗಳನ್ನು ನಿರ್ಧಾರ ಮಾಡಿದಾಗ, ನಿರ್ದಿಷ್ಟ ಹಣಕಾಸು ಗುರಿಗೆ ಪ್ರತಿ ಮ್ಯೂಚುವಲ್ ಫಂಡ್ ಅನ್ನೂ ನೀವು ಟ್ಯಾಗ್ ಮಾಡಬಹುದು. 
  • ನಿಮ್ಮ ಫಂಡ್‌ಗಳನ್ನು ಆಯ್ಕೆ ಮಾಡಿ: ನಿಮ್ಮ ಹಣಕಾಸಿನ ಗುರಿಗಳು ಮತ್ತು ರಿಸ್ಕ್ ಸಹಿಸಿಕೊಳ್ಳುವ ಸಾಮರ್ಥ್ಯ ನಿಮಗೆ ತಿಳಿದಾಗ, ಈ ವ್ಯಾಪ್ತಿಗೆ ಹೊಂದುವ ಫಂಡ್‌ಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. 
  • ಅಸೆಟ್ ನಿಯೋಜನೆ: ಬೇರೆ ಬೇರೆ ಅಸೆಟ್ ಕ್ಲಾಸ್‌ಗಳಲ್ಲಿ ಅಸೆಟ್ ನಿಯೋಜನೆ ಅಥವಾ ನಿಮ್ಮ ಹೂಡಿಕೆ ಡೈವರ್ಸಿಫಿಕೇಶನ್‌ ಅತ್ಯಂತ ಮುಖ್ಯ ಅಂಶವಾಗಿದ್ದು, ಇದು ನಿಮ್ಮ ಪೋರ್ಟ್‌ಫೋಲಿಯೋವನ್ನು ಸಮತೋಲನದಿಂದ ಇಡುತ್ತದೆ. ಸಮತೋಲಿತ ಪೋರ್ಟ್‌ಫೋಲಿಯೋ ಎಂದರೆ, ಈಕ್ವಿಟಿ ಫಂಡ್‌ಗಳು, ಡೆಟ್ ಫಂಡ್‌ಗಳು, ಹೈಬ್ರಿಡ್‌ ಫಂಡ್‌ಗಳು ಮತ್ತು ಇತರೆಯಲ್ಲಿ ಹೂಡಿಕೆಗಳನ್ನು ವಿಸ್ತರಿಸುವುದಾಗಿದೆ. ಇದು ಅತ್ಯಂತ ಮುಖ್ಯ. ಏಕೆಂದರೆ, ಮಾರ್ಕೆಟ್ ಸ್ಥಿತಿಗತಿಗಳನ್ನು ಆಧರಿಸಿ ಬೇರೆ ಬೇರೆ ಅಸೆಟ್ ಕ್ಲಾಸ್‌ಗಳು ಬೇರೆ ಬೇರೆ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ಇದರಿಂದಾಗಿ ರಿಸ್ಕ್ ವೈವಿಧ್ಯಮಯವಾಗಿರುತ್ತದೆ ಎಂಬ ಖಾತ್ರಿ ಮೂಡುತ್ತದೆ.
  • ಮೇಲ್ವಿಚಾರಣೆ, ಪರಿಶೀಲನೆ ಮತ್ತು ಮರುಸಮತೋಲನ: ಅಂತಿಮ ಹಂತವೆಂದರೆ, ನಿಮ್ಮ ಹೂಡಿಕೆಗಳನ್ನು ಮೇಲ್ವಿಚಾರಣೆ, ಪರಿಶೀಲನೆ ಮತ್ತು ಮರುಸಮತೋಲನ ಮಾಡುವುದಾಗಿದೆ. ಇದರಲ್ಲಿ ನೀವು ನಿಮ್ಮ ಹೂಡಿಕೆಗಳನ್ನು ನೋಡಬೇಕು ಮತ್ತು ವೈವಿಧ್ಯಗೊಳಿಸುವುದು, ಹೂಡಿಕೆಯ ಆವರ್ತನ, ಅಸೆಟ್‌ಗಳ ಮರುಸಮತೋಲನಗೊಳಿಸುವುದು ಇತ್ಯಾದಿಯನ್ನು ನಿರ್ಧಾರ ಮಾಡಬೇಕು. ನಿಮ್ಮ ಮ್ಯೂಚುವಲ್ ಫಂಡ್‌ಗಳ ಕಾರ್ಯಕ್ಷಮತೆಯನ್ನು ನೀವು ಪರಿಶೀಲನೆ ಮಾಡಬಹುದು ಮತ್ತು ದೀರ್ಘ ಅವಧಿಯಿಂದ ಅದು ಕಡಿಮೆ ಕಾರ್ಯಕ್ಷಮತೆಯನ್ನು ತೋರಿಸುತ್ತಿದ್ದರೆ, ಉತ್ತಮ ಫಂಡ್‌ಗೆ ನೀವು ಬದಲಿಸಬಹುದು. 

 

ಹಕ್ಕು ನಿರಾಕರಣೆ

ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.

285

ಮ್ಯೂಚುವಲ್‌ ಫಂಡ್‌ ಸೂಕ್ತವೇ??