ತಮ್ಮ ಮಗುವಿನ ಶಿಕ್ಷಣ ವೆಚ್ಚಗಳಿಗಾಗಿ ಉಳಿತಾಯ ಮಾಡಲು ಹಲವು ವಿಧಾನಗಳಿವೆ. ಹಣದುಬ್ಬರದ ದರವನ್ನು ಪರಿಗಣಿಸಿದರೆ, ಶಿಕ್ಷಣ ನಿಧಿಯಾಗಿ ಒಂದು ನಿಧಿಯನ್ನು ಕ್ರೋಢೀಕರಿಸಲು ಉಳಿತಾಯ ಮಾಡುವುದಕ್ಕಿಂತಹೂಡಿಕೆ ಮಾಡುವುದು ಉತ್ತಮ ಆಯ್ಕೆಯಾಗಿದೆ. ನಿಮ್ಮ ಮಗುವಿನ ಶಿಕ್ಷಣಕ್ಕೆ ಯೋಜನೆ ಮಾಡಲು ಸಹಾಯ ಮಾಡುವ ಹೂಡಿಕೆ ವಿಧಾನಗಳ ಪೈಕಿ ಮ್ಯೂಚುವಲ್ ಫಂಡ್ ಕೂಡಾ ಒಂದಾಗಿದೆ. ಮ್ಯೂಚುವಲ್ ಫಂಡ್‌ಗಳನ್ನು ಬಳಸಿಕೊಂಡು ಈಕ್ವಿಟಿ ಮಾರ್ಕೆಟ್‌ಗೆ ನೀವು ತೆರೆದುಕೊಳ್ಳುತ್ತೀರಿ ಮತ್ತು ಅದೇ ವೇಳೆ, ಒಂದೇ ಸ್ಟಾಕ್‌ನಲ್ಲಿ ಹೂಡಿಕೆ ಮಾಡುವ ಅಪಾಯವನ್ನು ನೀವು ವೈವಿಧ್ಯಗೊಳಿಸುತ್ತೀರಿ.
ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಲು ಎರಡು ವಿಧಾನಗಳಿವೆ: ಏಕ ಗಂಟು ಮತ್ತು ಎಸ್‌ಐಪಿ (ಸಿಸ್ಟಮ್ಯಾಟಿಕ್ ಹೂಡಿಕೆ ಯೋಜನೆ). ಉದ್ದೇಶವು ಶಿಕ್ಷಣದ್ದಾಗಿರುವುದರಿಂದ, ಎಸ್‌ಐಪಿ ಒಂದು ಉತ್ತಮ ವಿಧಾನವಾಗಿದೆ.
ಉದಾಹರಣೆಗೆ, 10 ವರ್ಷಗಳವರೆಗೆ ಪ್ರತಿ ತಿಂಗಳು ರೂ. 15,000 ಹೂಡಿಕೆ ಮಾಡಿದರೆ, ವಾರ್ಷಿಕ 12% ಬಡ್ಡಿ ದರ ಊಹಿಸಿದರೆ 34,85,086 ರೂ. ಸಂಗ್ರಹವಾಗಿರುತ್ತದೆ.
ನಿಮ್ಮ ಮಗುವಿನ ಶಿಕ್ಷಣಕ್ಕೆ ಮ್ಯೂಚುವಲ್ ಫಂಡ್‌ಗಳು ಯಾಕೆ ಸೂಕ್ತವಾದ ಹೂಡಿಕೆ ಆಯ್ಕೆಯಾಗಿದೆ:
- ಇವು ದೀರ್ಘಕಾಲೀನ ಹೂಡಿಕೆಗೆ ಸೂಕ್ತವಾಗಿದೆ.
- ರಿವಾರ್ಡ್ ನೀಡುವ ರಿಟರ್ನ್ಸ್‌ಗಾಗಿ ಇಟ್ಟುಕೊಳ್ಳಿ.
- ವೃತ್ತಿಪರ ಫಂಡ್ ಮ್ಯಾನೇಜ್‌ಮೆಂಟ್‌ನ ಒಂದು ಅಂಶವೂ ಇದೆ.
- ಇದು ಫ್ಲೆಕ್ಸಿಬಿಲಿಟಿ ಮತ್ತು ಲಿಕ್ವಿಡಿಟಿ (ನಗದೀಕರಣ) ಹೊಂದಿರುತ್ತದೆ.
- ಗರಿಷ್ಠ ಫಲಿತಾಂಶ ಮತ್ತು ರಿಸ್ಕ್ ನಿರ್ವಹಣೆಗೆ ನಿಮ್ಮ ಪೋರ್ಟ್‌ಫೋಲಿಯೋವನ್ನು ವೈವಿಧ್ಯಗೊಳಿಸಬಹುದು.
- ಇದು ಕಸ್ಟಮೈಸ್ ಮಾಡಬಹುದಾದ ಹೂಡಿಕೆ ಆಯ್ಕೆಯಾಗಿದೆ.
- ಇದು ತೆರಿಗೆ ಪ್ರಯೋಜನಗಳನ್ನೂ ಒಳಗೊಂಡಿರುತ್ತದೆ.
- ನೀವು ಎಸ್‌ಐಪಿ ವಿಧಾನ ಅಥವಾ ಏಕ ಗಂಟಿನ ಹೂಡಿಕೆಯನ್ನು ಆಯ್ಕೆ ಮಾಡಬಹುದು.
ಒಂದು ಮಗುವಿನ ಉನ್ನತ ಶಿಕ್ಷಣವು ಯಾವುದೇ ಪಾಲಕರಿಗೆ ಹೂಡಿಕೆ ವಿಷಯದಲ್ಲಿ ಅತ್ಯಂತ ಪ್ರಮುಖ ಅಂಶವಾಗಿದೆ. ಉನ್ನತ ಗುಣಮಟ್ಟದ ಶಿಕ್ಷಣದ ವೆಚ್ಚವು ಕೂಡಾ ಈ ಹಣಕಾಸಿನ ಗುರಿಯನ್ನು ನಿರ್ಧಾರ ಮಾಡುವುದಕ್ಕೆ ಇನ್ನೊಂದು ಮಹತ್ವದ ಅಂಶವಾಗಿರುತ್ತದೆ. ವ್ಯಕ್ತಿಗಳ ಗುರಿಗಾಗಿ ಸಂಪತ್ತು ರಚನೆ ಮಾಡಲು ಮ್ಯೂಚುವಲ್ ಫಂಡ್‌ಗಳು ಒಂದು ಉತ್ತಮ ಹೂಡಿಕೆ ಆಯ್ಕೆಯಾಗಿದೆ. ಇದು ಈಕ್ವಿಟಿ ಮಾರ್ಕೆಟ್ನ ಪ್ರಯೋಜನವನ್ನು ಪರೋಕ್ಷವಾಗಿ ಪಡೆಯಲು ಅನುವು ಮಾಡಿಕೊಡುತ್ತದೆ (ಈಕ್ವಿಟಿಗಳು ಸಾಮಾನ್ಯವಾಗಿ ಅಧಿಕ ರಿಟರ್ನ್ ದರವನ್ನು ನೀಡುತ್ತವೆ ಎಂದು ಭಾವಿಸಿದಾಗ).
ಹಕ್ಕು ನಿರಾಕರಣೆ
ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.