ಬಹುತೇಕ ಮ್ಯೂಚುವಲ್ ಫಂಡ್ ಸ್ಕೀಮ್ಗಳು ಓಪನ್ ಎಂಡ್ ಸ್ಕೀಮ್ಗಳಾಗಿವೆ. ಇವು ಯಾವುದೇ ನಿರ್ಬಂಧಗಳಿಲ್ಲದೇ ಇಡೀ ಹೂಡಿಕೆ ಮೊತ್ತವನ್ನು ರಿಡೀಮ್ ಮಾಡಲು ಹೂಡಿಕೆದಾರರಿಗೆ ಅನುವು ಮಾಡುತ್ತವೆ.
ಕೆಲವೇ ಸನ್ನಿವೇಶಗಳಲ್ಲಿ, ಟ್ರಸ್ಟೀಗಳ ಮಂಡಳಿಯು ನಿರ್ಧರಿಸಿದಂತೆ ವಿಪರೀತ ಸನ್ನಿವೇಶಗಳಲ್ಲಿ ಮಾತ್ರ ಸ್ಕೀಮ್ಗಳು ರಿಡೆಂಪ್ಷನ್ ಮೇಲೆ ನಿರ್ಬಂಧ ವಿಧಿಸುತ್ತವೆ.
ಕಲಂ 80ಸಿ ಅಡಿಯಲ್ಲಿ ತೆರಿಗೆ ಲಾಭಗಳನ್ನು ಒದಗಿಸುವ ಎಲ್ಲ ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (ಇಎಲ್ಎಸ್ಎಸ್)ಗೆ 3 ವರ್ಷಗಳವರೆಗೆ ಲಾಕ್ ಇನ್ ಹೂಡಿಕೆ ಅಗತ್ಯವಿದೆ. ಆದರೆ, ಈ ಅವಧಿಯಲ್ಲಿ ಈ ಸ್ಕೀಮ್ಗಳು ಘೋಷಿಸಿದ ಯಾವುದೇ ಡಿವಿಡೆಂಡ್ ನಿರ್ಬಂಧಗಳಿಲ್ಲದೇ ಪೇ ಔಟ್ ರೀತಿ ಲಭ್ಯವಿರುತ್ತದೆ. ಇಂತಹ ಲಾಕ್ ಇನ್ ಅನ್ನು ಯಾವುದೇ ಇತರ ವಿಭಾಗದ ಸ್ಕೀಮ್ಗಳು ವಿಧಿಸುವುದಿಲ್ಲ. ಸ್ಕೀಮ್ಗೆ ಅಲ್ಪಾವಧಿ ಹೂಡಿಕೆದಾರರು ಪ್ರವೇಶಿಸುವುದನ್ನು ತಡೆಯಲು ಅವಧಿಗೂ ಮೊದಲೇ ರಿಡೆಂಪ್ಷನ್ ಮಾಡಿದರೆ ಕೆಲವು ಎಕ್ಸಿಟ್ ಲೋಡ್ ವಿಧಿಸಬಹುದು. ಸಲ್ಲಿಸಬೇಕಿರುವ ಕನಿಷ್ಠ ಮೊತ್ತವನ್ನು ಎಎಂಸಿಗಳು ನಿಗದಿಸಬಹುದು. ಇಂತಹ ಎಲ್ಲ ಮಾಹಿತಿಯನ್ನೂ ಸ್ಕಿಮ್ ಸಂಬಂಧಿ ದಾಖಲೆಯಲ್ಲಿ ವಿವರಿಸಲಾಗುತ್ತದೆ. ಇದನ್ನು ಹೂಡಿಕೆದಾರರು ಹೂಡಿಕೆ ಮಾಡುವುದಕ್ಕೂ ಮೊದಲು ಓದಿಕೊಳ್ಳಬೇಕು.
ಕ್ಲೋಸ್ಡ್ ಎಂಡ್ ಸ್ಕೀಮ್ಗಳು ಖಚಿತ ಅವಧಿಯನ್ನು ಹೊಂದಿರುತ್ತವೆ ಮತ್ತು ವಜಾ/ಅಂತಿಮ ದಿನಾಂಕದವರೆಗೆ ಹೂಡಿಕೆ ಮಾಡಲು ಅಥವಾ ರಿಡೆಂಪ್ಷನ್ಗೆ ಎಎಂಸಿಗಳು ಅನುಮತಿಸುವುದಿಲ್ಲ. ಆದರೆ, ಎಲ್ಲ ಕ್ಲೋಸ್ಡ್ ಎಂಡ್ ಫಂಡ್ಗಳು ತಮ್ಮ ಯೂನಿಟ್ಗಳನ್ನು ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಲಿಸ್ಟ್ ಮಾಡಿರುತ್ತವೆ. ಲಿಕ್ವಿಡಿಟಿ ಅಗತ್ಯವನ್ನು ಹೊಂದಿರುವ ಹೂಡಿಕೆದಾರರು ಮಾರ್ಕೆಟ್ ನಿಗದಿಸಿದ ದರಕ್ಕೆ ಇನ್ನೊಂದು ಹೂಡಿಕೆದಾರರಿಗೆ ಮಾರಾಟ ಮಾಡಬಹುದು.