ಮ್ಯೂಚುವಲ್‌ ಫಂಡ್‌ಗಳು ಪಾಸ್‌ಬುಕ್‌ ವಿತರಿಸುತ್ತವೆಯೇ?

ಮ್ಯೂಚುವಲ್‌ ಫಂಡ್‌ಗಳು ಪಾಸ್‌ಬುಕ್‌ ವಿತರಿಸುತ್ತವೆಯೇ?

ಬ್ಯಾಂಕ್‌ಗಳು ಮತ್ತು ಕೆಲವು ಸಣ್ಣ ಉಳಿತಾಯ ಸ್ಕೀಮ್‌ಗಳು ಪಾಸ್‌ಬುಕ್‌ ನೀಡುತ್ತವೆಯಾದರೂ, ಮ್ಯೂಚುವಲ್‌ ಫಂಡ್‌ಗಳು ಪಾಸ್‌ಬುಕ್‌ ವಿತರಿಸುವುದಿಲ್ಲ. ಅವು ಖಾತೆ ಸ್ಟೇಟ್‌ಮೆಂಟ್ ಅನ್ನು ನೀಡುತ್ತವೆ. ಪಾಸ್‌ಬುಕ್‌ನ ಮೂಲ ಉದ್ದೇಶವು ಬ್ಯಾಂಕ್‌ನೊಂದಿಗೆ ನಾವು ಹೊಂದಿರುವ ಡೆಪಾಸಿಟ್‌, ಹಿಂಪಡೆತ, ಬಡ್ಡಿ ಕ್ರೆಡಿಟ್ ಇತ್ಯಾದಿ ಎಲ್ಲ ವಹಿವಾಟುಗಳನ್ನು ಟ್ರ್ಯಾಕ್ ಮಾಡುವುದಾಗಿದೆ. ಮ್ಯೂಚುವಲ್ ಫಂಡ್‌ ಸ್ಕೀಮ್‌ನಲ್ಲೂ ಕೂಡ ಇದೇ ರೀತಿಯ ವಹಿವಾಟುಗಳು ನಡೆಯುತ್ತವೆ. ಖರೀದಿ, ರಿಡೆಂಪ್ಷನ್‌ಗಳು, ಸ್ವಿಚ್‌ಗಳು, ಡಿವಿಡೆಂಡ್‌ನ ಮರುಹೂಡಿಕೆ ಇತ್ಯಾದಿ ನಡೆಯುತ್ತವೆ. ಮ್ಯೂಚುವಲ್‌ ಫಂಡ್ ಸ್ಕೀಮ್‌ನಲ್ಲಿ ಇಂತಹ ವಹಿವಾಟುಗಳನ್ನು ಖಾತೆ ಸ್ಟೇಟ್‌ಮೆಂಟ್‌ನಲ್ಲಿ ದಾಖಲಿಸಲಾಗುತ್ತದೆ.

ಸ್ಕೀಮ್‌ನಲ್ಲಿ ಮೊದಲ ಹೂಡಿಕೆಮಾಡಿದಾಗ ಖಾತೆ ಸ್ಟೇಟ್‌ಮೆಂಟ್‌ ಅನ್ನು ವಿತರಿಸಲಾಗುತ್ತದೆ. ಎಲ್ಲ ಅಗತ್ಯ ವಿವರಗಳನ್ನೂ ಖಾತೆ ಸ್ಟೇಟ್‌ಮೆಂಟ್‌ ಪ್ರತಿಫಲಿಸುತ್ತದೆ: ಹೂಡಿಕೆದಾರರ ಹೆಸರು, ವಿಳಾಸ, ಜಂಟಿ ಹೋಲ್ಡಿಂಗ್‌ನ ವಿವರಗಳು, ಹೂಡಿಕೆ ಮಾಡಿದ ಮೊತ್ತ, ಎನ್‌ಎವಿ ವಿವರಗಳು, ನಿಯೋಜಿಸಿದ ಯೂನಿಟ್‌ಗಳು ಇತ್ಯಾದಿ. ಪ್ರತಿ ಬಾರಿ ಹೊಸ ವಹಿವಾಟು ಮಾಡಿದಾಗ ಖಾತೆ ಸ್ಟೇಟ್‌ಮೆಂಟ್ ಅನ್ನು ನವೀಕರಿಸಲಾಗುತ್ತದೆ ಮತ್ತು ಒಂದು ಪ್ರತಿಯನ್ನು ಹೂಡಿಕೆದಾರರಿಗೆ ಮೇಲ್ ಮಾಡಲಾಗುತ್ತದೆ. ಈ ಡಿಜಿಟಲ್ ಕಾಲದಲ್ಲಿ, ಹಲವು ಹೂಡಿಕೆದಾರರು ಇ-ಸ್ಟೇಟ್‌ಮೆಂಟ್‌ಗಳನ್ನು ಬಯಸುತ್ತಾರೆ. ಇದನ್ನು ಓದಲು, ಆಕ್ಸೆಸ್ ಮಾಡಲು ಮತ್ತು ಮಾಹಿತಿ ಸಂಗ್ರಹಿಸಲು ಅತ್ಯಂತ ಅನುಕೂಲಕರ ವಿಧಾನವಾಗಿದೆ.

ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಗಳು (ಎಎಂಸಿ) ಅಥವಾ ಅದರ ರಿಜಿಸ್ಟ್ರಾರ್‌ರನ್ನು ಸಂಪರ್ಕಿಸುವ ಮೂಲಕ ನಕಲಿ ಖಾತೆ ಸ್ಟೇಟ್‌ಮೆಂಟ್ ಅನ್ನು ಯಾವುದೇ ಸಮಯದಲ್ಲಿ ಹೂಡಿಕೆದಾರರು ಆಕ್ಸೆಸ್ ಮಾಡಬಹುದು ಮತ್ತು ಪಡೆಯಬಹುದು. ಸ್ಕೀಮ್‌ ಖಾತೆ ಸ್ಟೇಟ್‌ಮೆಂಟ್‌ ಈ ಮೂಲಕ ಪಾಸ್‌ಬುಕ್‌ನ ಕೆಲಸ ಮಾಡುತ್ತದೆ.

436

ಮ್ಯೂಚುವಲ್‌ ಫಂಡ್‌ ಸೂಕ್ತವೇ??