ನೀವು ಯಾವುದೇ ಮ್ಯೂಚುವಲ್ ಫಂಡ್ ಹೂಡಿಕೆ ಮಾಡುವುದಕ್ಕೂ ಮುನ್ನ, ನೀವು ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಗುರುತು ಮತ್ತು ವಿಳಾಸ ದಾಖಲೆಯನ್ನು ಸಲ್ಲಿಸುವ ಮೂಲಕ ಇದನ್ನು ಮಾಡಬಹುದು. ಎಸ್‌ಐಪಿ ಆರಂಭಿಸುವುದು ಅಥವಾ ನಿಲ್ಲಿಸುವುದು ಅತ್ಯಂತ ಅನುಕೂಲಕರ ಮತ್ತು ಸುಲಭವಾಗಿದೆ. ಎಸ್‌ಐಪಿ ಆರಂಭಿಸುವುದು ಹೇಗೆ ಎಂಬುದನ್ನು ಎಡಭಾಗದಲ್ಲಿರುವ ಗ್ರಾಫಿಕ್ಸ್‌ನಲ್ಲಿ ವಿವರಿಸಲಾಗಿದೆ.
ಒಂದು ಅಥವಾ ಎರಡು ಕಂತನ್ನು ನೀವು ತಪ್ಪಿಸಿದರೆ ಏನಾಗುತ್ತದೆ?
ಎಸ್‌ಐಪಿ ಎಂಬುದು ಹೂಡಿಕೆಯ ಅನುಕೂಲಕರವಾದ ಒಂದು ವಿಧಾನವಾಗಿದೆ. ಇದು ಒಪ್ಪಂದದ ಬಾಧ್ಯತೆಯಲ್ಲ. ಹೀಗಾಗಿ ಒಂದು ಅಥವಾ ಎರಡು ಕಂತನ್ನು ನೀವು ತಪ್ಪಿಸಿದರೆ ಯಾವುದೇ ದಂಡ ಇರುವುದಿಲ್ಲ. ಹೆಚ್ಚೆಂದರೆ, ಎಸ್‌ಐಪಿಯನ್ನು ಮ್ಯೂಚುವಲ್ ಫಂಡ್ ಕಂಪನಿಯು ನಿಲ್ಲಿಸಬಹುದು. ಅಂದರೆ ಮುಂದಿನ ಕಂತುಗಳನ್ನು ನಿಮ್ಮ ಬ್ಯಾಂಕ್ ಖಾತೆಯಿಂದ ಡೆಬಿಟ್ ಮಾಡಲಾಗುವುದಿಲ್ಲ. ಇದೇ ವೇಳೆ, ನೀವು ಇನ್ನೊಂದು ಎಸ್‌ಐಪಿಯನ್ನು ಅದೇ ಪೋಲಿಯೋದಲ್ಲಿ, ಮೊದಲಿನ ಎಸ್‌ಐಪಿ ನಿಂತು ಹೋಗಿದ್ದರೂ ನೀವು ಯಾವುದೇ ಸಮಯದಲ್ಲಿ ಅರಂಭಿಸಬಹುದು. ಇದನ್ನು ಹೊಸ ಎಸ್‌ಐಪಿ ಎಂದೇ ಪರಿಗಣಿಸಲಾಗುತ್ತದೆ ಮತ್ತು ಹೊಸದಾಗಿ ಎಸ್‌ಐಪಿ ಆರಂಭಿಸಲು ಸ್ವಲ್ಪ ಸಮಯ ಹಿಡಿಯಬಹುದು ಎಂಬುದನ್ನು ದಯವಿಟ್ಟು ಗಮನದಲ್ಲಿಟ್ಟುಕೊಳ್ಳಿ.
ಇಂದೇ ನಿಮ್ಮ ಹಣಕಾಸು ತಜ್ಞರ ಸಲಹೆ ಪಡೆಯಿರಿ ಮತ್ತು ಮ್ಯೂಚುವಲ್ ಫಂಡ್‌ನ ಪ್ರಯೋಜನಗಳನ್ನು ಆನಂದಿಸಲು ಆರಂಭಿಸಿ!