ಪೋರ್ಟ್‌ಫೋಲಿಯೋ ವೈವಿಧ್ಯತೆಯ ಪ್ರಯೋಜನಗಳು ಯಾವುವು

ಪೋರ್ಟ್‌ಫೋಲಿಯೋ ವೈವಿಧ್ಯತೆಯ ಪ್ರಯೋಜನಗಳು ಯಾವುವು zoom-icon

“ನಿಮ್ಮ ಎಲ್ಲ ಮೊಟ್ಟೆಗಳನ್ನು ಒಂದೇ ಬಾಸ್ಕೆಟ್‌ನಲ್ಲಿ ಎಂದಿಗೂ ಇಡಬೇಡಿ”.

ಹೂಡಿಕೆ ನಿರ್ಧಾರಗಳನ್ನು ಮಾಡುವಾಗ ರಿಸ್ಕ್ ಮತ್ತು ರಿಟರ್ನ್‌ ಮಧ್ಯೆ ಸಮತೋಲನವನ್ನು ಸಾಧಿಸುವುದು ಅತ್ಯಂತ ಮುಖ್ಯವಾಗಿದೆ. ಈ ಸಮತೋಲನ ಸಾಧಿಸುವಾಗ ವೈವಿಧ್ಯತೆ ಅತ್ಯಂತ ಪ್ರಮುಖ ಕಾರ್ಯತಂತ್ರವಾಗಿದ್ದು, ವಿಭಿನ್ನ ಸ್ವತ್ತು ವರ್ಗಗಳು ಮತ್ತು ವಲಯಗಳಲ್ಲಿ ನಿಮ್ಮ ಹೂಡಿಕೆಯನ್ನು ವಿಸ್ತರಿಸಲು ಅನುವು ಮಾಡುತ್ತದೆ. ಇದರಿಂದ, ಯಾವುದೇ ಒಂದು ನಿರ್ದಿಷ್ಟ ರಿಸ್ಕ್‌ಗೆ ನಿಮ್ಮ ತೆರೆದುಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ.

ಈ ಲೇಖನದಲ್ಲಿ, ಪೋರ್ಟ್‌ಫೋಲಿಯೋ ವೈವಿಧ್ಯತೆ ಎಂದರೇನು ಎಂದು ನೋಡೋಣ. ಅದರಲ್ಲೂ ವಿಶೇಷವಾಗಿ ಮ್ಯೂಚುವಲ್‌ ಫಂಡ್‌ಗಳ ವಿಚಾರದಲ್ಲಿ ವೈವಿಧ್ಯತೆ ಎಂದರೇನು ಮತ್ತು ನೀವು ಬಯಸಿರುವ ಹೂಡಿಕೆಯ ಮೇಲಿನ ರಿಟರ್ನ್ಸ್‌ಗಳನ್ನು ಸಾಧಿಸಲು ಇದು ಹೇಗೆ ಸಹಾಯ ಮಾಡಬಹುದು ಎಂದು ನೋಡೋಣ.

ಪೋರ್ಟ್‌ಫೋಲಿಯೋ ವೈವಿಧ್ಯತೆ ಎಂದರೇನು?
ನೀವು ಊಟಕ್ಕೆಂದು ಹೊರಗಡೆ ಹೋದಾಗ, ಗರಿಷ್ಠ ಸಂತೃಪ್ತಿಗಾಗಿ ಎಲ್ಲವೂ ಒಳಗೊಂಡಿರುವ ಊಟಕ್ಕೆ ಆರ್ಡರ್ ಮಾಡುತ್ತೀರಿ. ಸೂಪ್‌, ಆಪಟೈಸರ್, ಮೇನ್ ಕೋರ್ಸ್‌, ಸಿಹಿ ತಿಂಡಿ ಹಾಗೂ ಯಾವುದಾದರೂ ಡ್ರಿಂಕ್ಸ್‌ಗೆ ಆರ್ಡರ್‌ ಮಾಡಬಹುದು. ಇದರಿಂದ ನೀವು ವಿವಿಧ ಸ್ವಾದ ಮತ್ತು ರುಚಿಯನ್ನು ಪಡೆಯುತ್ತೀರಿ ಎಂಬುದು ಖಚಿತವಾಗುತ್ತದೆ. ಹಾಗೆಯೇ, ಯಾವುದೇ ಒಂದು ಕೋರ್ಸ್‌ನಿಂದ ಸಂತೃಪ್ತಿಯಾಗದಿದ್ದರೆ, ಇನ್ನೊಂದು ಕೋರ್ಸ್‌ ನಿಮಗೆ ಸಂತೃಪ್ತಿ ನೀಡಬಹುದಾದ ಸಾಧ್ಯತೆ ಇರುತ್ತದೆ.

ಇದೇ ರೀತಿಯಲ್ಲಿ ಪೋರ್ಟ್‌ಫೋಲಿಯೋ ವೈವಿಧ್ಯತೆಯನ್ನೂ ನೋಡಿ. ರಿಸ್ಕ್‌ಗೆ ಚೆನ್ನಾಗಿ ಹೊಂದಿಕೊಂಡ ರಿಟರ್ನ್ಸ್‌ಗೆ ವಿವಿಧ ಸಲಕರಣೆಗಳಲ್ಲಿ ಹೂಡಿಕೆ ಮಾಡುವುದನ್ನು ಪೋರ್ಟ್‌ಫೋಲಿಯೋ ವೈವಿಧ್ಯತೆಯು ಒಳಗೊಂಡಿರುತ್ತದೆ. ಅಂದರೆ, ರಿಸ್ಕ್‌

ಇನ್ನಷ್ಟು ಓದಿ

ಮ್ಯೂಚುವಲ್‌ ಫಂಡ್‌ ಸೂಕ್ತವೇ??