ಯಾವ ವಯಸ್ಸಿನಲ್ಲಿ ವ್ಯಕ್ತಿಯು ಹೂಡಿಕೆ ಆರಂಭಿಸಬೇಕು?

Video

ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವುದು ತುಂಬಾ ಬೇಗವಾಯಿತೇ ಅಥವಾ ವಿಳಂಬವಾಯಿತೇ ಎಂದು ನೀವು ಯೋಚಿಸುತ್ತಿದ್ದರೆ, ಹೂಡಿಕೆ ಮಾಡಲು ಸರಿಯಾದ ಸಮಯವೇ ಈಗ. ಅಂದರೆ, ನೀವು ಹೂಡಿಕೆ ಮಾಡಲು ನಿರ್ಧರಿಸಿದ ಸಮಯ. ಆದರೆ, ನೀವು ಬೇಗ ಹೂಡಿಕೆ ಆರಂಭಿಸಿದಷ್ಟೂ, ನಿಮಗೆ ಉತ್ತಮ. ಯಾಕೆಂದರೆ, ಸಂಚಯದ ಶಕ್ತಿಯ ಮೂಲಕ ದೀರ್ಘಕಾಲದಲ್ಲಿ ಸಂಪತ್ತು ಸೃಷ್ಟಿಗೆ ಮ್ಯೂಚುವಲ್ ಫಂಡ್ಗಳು ಸಹಾಯ ಮಾಡುತ್ತವೆ.  

ನಿಮ್ಮ ಹೂಡಿಕೆಯ ಮೇಲೆ ಸಂಚಯದ ಶಕ್ತಿಯು ಜಾದೂ ಮಾಡಲು ಆರಂಭಿಸುವುದಕ್ಕಾಗಿ, ನೀವು ನಿಮ್ಮ ವೃತ್ತಿ ಜೀವನದ ಆರಂಭದಲ್ಲಿ ಹೂಡಿಕೆ ಆರಂಭಿಸಬೇಕು. ಅಷ್ಟಕ್ಕೂ, ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಲು ಸೂಕ್ತವಾದ ಸಮಯವೆಂದರೆ, ನೀವು ಗಳಿಕೆ ಆರಂಭಿಸಿದ ಸಮಯವೇ ಆಗಿರುತ್ತದೆ. ನಿಮ್ಮ ಮಾಸಿಕ ಗಳಿಕೆಯಿಂದ ಸ್ವಲ್ಪ ಉಳಿಸಲು ಮತ್ತು ಅದನ್ನು ಎಸ್ಐಪಿ ಮೂಲಕ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಲು ಸಾಧ್ಯವಾದರೆ, ನಿಮ್ಮ ಹಣಕ್ಕೆ ಬೆಳೆಯಲು ಸಾಕಷ್ಟು ಕಾಲಾವಕಾಶವನ್ನು ನೀವು ನೀಡಿದಂತಾಗುತ್ತದೆ. ಅಗತ್ಯ ಉಂಟಾದಾಗ ಭವಿಷ್ಯದಲ್ಲಿ ಇಂತಹ ಶಿಸ್ತುಬದ್ಧ ಹೂಡಿಕೆಯ ಪ್ರಯೋಜನವನ್ನು ನೀವು ಪಡೆಯಬಹುದು. ನಿಮ್ಮ ರಿಸ್ಕ್ ತಾಳಿಕೊಳ್ಳುವ ಸಾಮರ್ಥ್ಯಕ್ಕೆ, ಅಂದರೆ ಆ ರೀತಿಯ ರಿಸ್ಕ್ ಅನ್ನು ತೆಗೆದುಕೊಳ್ಳುವ ನಿಮ್ಮ ಸಾಮರ್ಥ್ಯ ಮತ್ತು ಸಮ್ಮತಿಗೆ ಹೊಂದುವ ಮ್ಯೂಚುವಲ್ ಫಂಡ್ ಸ್ಕೀಮ್ಗಳಲ್ಲಿ ಹೂಡಿಕೆ ಮಾಡಿ. 

ಜೀವನದಲ್ಲಿ ನಾವು ಮುಂದೆ ಸಾಗಿದಂತೆ, ನಮ್ಮ ಜೀವನವೂ ಸಂಬಳದ ಜೊತೆಗೆ ಬೆಳೆಯುತ್ತದೆ. ನಿಮ್ಮ ಮೊದಲ ಸಂಬಳದಿಂದ ಎಸ್ಐಪಿ ಮೂಲಕ ಹೂಡಿಕೆ

ಇನ್ನಷ್ಟು ಓದಿ

ಮ್ಯೂಚುವಲ್‌ ಫಂಡ್‌ ಸೂಕ್ತವೇ??