ಫಿಕ್ಸೆಡ್ ಇನ್‌ಕಮ್ ಫಂಡ್‌ಗಳು ಎಂದರೆ ಫಿಕ್ಸೆಡ್ ಇನ್‌ಕಮ್ ಸೆಕ್ಯುರಿಟಿಗಳಲ್ಲಿ ಅಸೆಟ್‌ಗಳನ್ನು ಹೊಂದಿರುವ ಮ್ಯೂಚುವಲ್ ಫಂಡ್ ಸ್ಕೀಮ್‌ಗಳಾಗಿರುತ್ತವೆ. ಇದರಲ್ಲಿ ಉದಾಹರಣೆಗೆ ಸರ್ಕಾರಿ ಸೆಕ್ಯುರಿಟಿಗಳು, ಡಿಬೆಂಚರ್‌ಗಳು, ಕಾರ್ಪೊರೇಟ್ ಬಾಂಡ್‌ಗಳು ಮತ್ತು ಇತರ ಹಣದ ಮಾರ್ಕೆಟ್ ಸಲಕರಣೆಗಳು ಇರುತ್ತವೆ. ಈ ಫಂಡ್‌ಗಳನ್ನೂ ಕೂಡಾ ವಿಶಾಲವಾಗಿ ಡೆಟ್ ಫಂಡ್‌ಗಳು ಎಂದು ಕರೆಯಲಾಗುತ್ತದೆ. ಕಾರ್ಪೊರೇಟ್ ಬಾಂಡ್ ಫಂಡ್‌ಗಳು, ಡೈನಾಮಿಕ್ ಬಾಂಡ್ ಫಂಡ್‌ಗಳು, ಬ್ಯಾಂಕಿಂಗ್ ಮತ್ತು ಪಿಎಸ್‌ಯು ಡೆಟ್ ಫಂಡ್‌ಗಳು, ಜಿಲ್ಟ್ ಫಂಡ್‌ಗಳು, ಲಿಕ್ವಿಡ್ ಫಂಡ್‌ಗಳು ಇತ್ಯಾದಿಯು ಫಿಕ್ಸೆಡ್ ಇನ್‌ಕಮ್ ಫಂಡ್‌ಗಳ ವರ್ಗಗಳಡಿಯಲ್ಲಿ ಬರುತ್ತವೆ.
ಫಿಕ್ಸೆಡ್ ಇನ್‌ಕಮ್ ಮ್ಯೂಚುವಲ್ ಫಂಡ್ ಸಾಮಾನ್ಯವಾಗಿ ಈ ವೈಶಿಷ್ಟ್ಯಗಳನ್ನು ಹೊಂದಿರುತ್ತವೆ:
ಫಿಕ್ಸೆಡ್ ಇನ್‌ಕಮ್ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುವುದು: ಬಾಂಡ್‌ಗಳು ಮತ್ತು ಇತರ ಫಿಕ್ಸೆಡ್ ಇನ್‌ಕಮ್ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುವ ಮೂಲಕ ರಿಟರ್ನ್ಸ್ ಜನರೇಟ್ ಮಾಡುವ ಗುರಿಯನ್ನು ಇದು ಹೊಂದಿದೆ. ಅಂದರೆ, ಈ ಫಂಡ್‌ಗಳು ಬಾಂಡ್‌ಗಳನ್ನು ಖರೀದಿ ಮಾಡುತ್ತವೆ ಮತ್ತು ಹೂಡಿಕೆಗಳ ಮೇಲೆ ಬಡ್ಡಿ ಆದಾಯವನ್ನು ಗಳಿಸುತ್ತವೆ.
ಮಾರ್ಕೆಟ್ ಏರಿಳಿತ ಕಡಿಮೆ: ಫಿಕ್ಸೆಡ್ ಇನ್‌ಕಮ್ ಸೆಕ್ಯುರಿಟಿಗಳಲ್ಲಿ ಏರಿಳಿತ ಕಡಿಮೆ ಇರುತ್ತದೆ ಮತ್ತು ಮಾರುಕಟ್ಟೆಯ ಏರಿಳಿತದಿಂದ ಕಡಿಮೆ ಪರಿಣಾಮವನ್ನು ಹೊಂದಿರುತ್ತದೆ.
ವೈವಿಧ್ಯಮಯ ಪೋರ್ಟ್‌ಫೋಲಿಯೋ: ಡೆಟ್ ಫಂಡ್‌ಗಳು ಡೆಟ್ ಮತ್ತು ಮನಿ ಮಾರ್ಕೆಟ್ ಸಲಕರಣೆಗಳೆರಡರಲ್ಲೂ ಹೂಡಿಕೆ ಮಾಡುತ್ತವೆ (ಉದಾ., ವಾಣಿಜ್ಯ ಕಾಗದಪತ್ರಗಳು, ಟ್ರೆಷರಿ ಬಿಲ್‌ಗಳು ಮತ್ತು ಇನ್ನಷ್ಟು). ಇದರಿಂದ ಡೆಟ್ ಫಂಡ್‌ಗಳ ಪೋರ್ಟ್‌ಫೋಲಿಯೋ ವೈವಿಧ್ಯಮಯವಾಗುತ್ತದೆ ಮತ್ತು
ಇನ್ನಷ್ಟು ಓದಿ