ಡೆಟ್ ಫಂಡ್‌ಗಳು ನನ್ನ ಹಣಕಾಸು ಗುರಿಗಳಿಗೆ ಸೂಕ್ತವೇ?

ಡೆಟ್ ಫಂಡ್‌ಗಳು ನನ್ನ ಹಣಕಾಸು ಗುರಿಗಳಿಗೆ ಸೂಕ್ತವೇ?

ಡೆಟ್‌ ಫಂಡ್‌ಗಳು ಸಾಮಾನ್ಯವಾಗಿ ಈಕ್ವಿಟಿ ಫಂಡ್‌ಗಳಿಗೆ ಹೋಲಿಸಿದರೆ ಕಡಿಮೆ, ಆದರೆ ಸ್ಥಿರವಾದ ರಿಟರ್ನ್‌ಗಳನ್ನು ನೀಡುತ್ತವೆ. ಇವು ಫಿಕ್ಸೆಡ್ ಇನ್‌ಕಮ್‌ ಮಾರ್ಕೆಟ್‌ನಲ್ಲಿ ವಹಿವಾಟು ನಡೆಸುವುದರಿಂದ ಪೋರ್ಟ್‌ಫೋಲಿಯೋಗೆ ಸ್ಥಿರತೆಯನ್ನು ಒದಗಿಸುತ್ತವೆ. ಈ ಫಿಕ್ಸೆಡ್ ಇನ್‌ಕಮ್ ಮಾರ್ಕೆಟ್‌ಗಳು, ಸ್ಟಾಕ್‌ ಮಾರ್ಕೆಟ್‌ಗಳಿಗೆ ಹೋಲಿಸಿದರೆ ಹೆಚ್ಚು ಸ್ಥಿರವಾಗಿರುತ್ತವೆ. ಮಕ್ಕಳ ಕಾಲೇಜು ಶಿಕ್ಷಣ, ವೈದ್ಯಕೀಯ ವೆಚ್ಚ, ಮನೆ, ನಿವೃತ್ತಿ ಇತ್ಯಾದಿಯಂತಹ ಭವಿಷ್ಯದ ಹಣಕಾಸು ಗುರಿಗಳನ್ನು ಪೂರೈಸಲು ಪ್ರತಿಯೊಬ್ಬರಿಗೂ ಹಣಕಾಸು ಯೋಜನೆಗಳು ಅಗತ್ಯವಿರುತ್ತವೆ. ನಾವು ನಮ್ಮ ಹಣವನ್ನು ವಿಭಿನ್ನ ಸ್ವತ್ತುಗಳಾದ ಭೂಮಿ, ಚಿನ್ನ, ಸ್ಟಾಕ್‌ಗಳು, ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಿ, ನಮ್ಮ ಜೀವನದ ವಿವಿಧ ಹಂತಗಳಲ್ಲಿ ಎದುರಾಗುವ ಹಲವು ಹಣಕಾಸು ಅಗತ್ಯಗಳನ್ನು ನೀಗಿಸಿಕೊಳ್ಳುತ್ತೇವೆ.

ಡೆಟ್‌ ಫಂಡ್‌ಗಳು ಅಲ್ಪಕಾಲದ ಗುರಿಗಳಿಗೆ ಸೂಕ್ತವಾಗಿರುತ್ತವೆ. ಈಕ್ವಿಟಿ ಫಂಡ್‌ಗಳು ದೀರ್ಘಕಾಲದ ಗುರಿಗಳಾದ ನಿವೃತ್ತಿ ಯೋಜನೆಯಂತಹವಕ್ಕೆ ಸೂಕ್ತವಾಗಿದ್ದು, ಏಕೆಂದರೆ ಅಲ್ಪಕಾಲದಲ್ಲಿ ಇವು ಹೆಚ್ಚು ಅಸ್ಥಿರವಾಗಿರುತ್ತವೆ. ಕೆಲವು ಡೆಟ್‌ ಫಂಡ್‌ಗಳಾದ ಲಿಕ್ವಿಡ್ ಮ್ಯೂಚುವಲ್‌ ಫಂಡ್‌ಗಳು ಕೆಲವು ತಿಂಗಳುಗಳವರೆಗೆ ನಿಮ್ಮ ಹಣವನ್ನು ಇಡಲು ಸೂಕ್ತ. ಸಾಮಾನ್ಯವಾಗಿ ಬೋನಸ್ ಸಿಕ್ಕಾಗ ಅಥವಾ ಇತರ ಹೂಡಿಕೆ ಕೈಗೆ ಬಂದಾಗ ಮುಂದೆ ಈ ಹಣವನ್ನು ಏನು ಮಾಡಬೇಕು ಎಂದು ನಿರ್ಧರಿಸುವುದಕ್ಕೂ ಮುನ್ನ ಈ ಫಂಡ್‌ಗಳಲ್ಲಿ ಇಡಬಹುದು. ನೀವು ಕಡ್ಡಾಯವಾಗಿ ಹೊರಬೇಕಾದ ಜವಾಬ್ದಾರಿಗೆ ಅಗತ್ಯವಾಗಿರುವ ಹಣವನ್ನು ಕೂಡಿಡಲು ಡೆಟ್‌ ಫಂಡ್‌ಗಳು ಸೂಕ್ತ. ಉದಾಹರಣೆಗೆ ಮುಂದಿನ 2 ವರ್ಷಗಳಲ್ಲಿ ನೀವು ಹಿಂಪಡೆಯಬೇಕಿರುವ ಕಾಲೇಜು ಶಿಕ್ಷಣಕ್ಕಾಗಿ ಮೀಸಲಿಟ್ಟ ಹಣ. ಇಂತಹ ಗುರಿಗಳಿಗೆ ನೀವು ಫಿಕ್ಸೆಡ್‌ ಇನ್‌ಕಮ್‌ ಫಂಡ್‌ನಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಬಹುದು. ಹೀಗಾಗಿ, ಡೆಟ್‌ ಫಂಡ್‌ಗಳು ಪ್ರತಿ ಹಣಕಾಸು ಯೋಜನೆಯ ಒಂದು ಭಾಗವಾಗಿರಬೇಕು.

441

ಮ್ಯೂಚುವಲ್‌ ಫಂಡ್‌ ಸೂಕ್ತವೇ??