ಅನಿಯಂತ್ರಿತ ಡೆಪಾಸಿಟ್ ಸ್ಕೀಮ್‌ಗಳು ಎಂದರೇನು?

ಅನಿಯಂತ್ರಿತ ಡೆಪಾಸಿಟ್ ಸ್ಕೀಮ್‌ಗಳು ಎಂದರೇನು?

ಮಾರುಕಟ್ಟೆಯಲ್ಲಿ ಲಭ್ಯವಿರುವುದಕ್ಕಿಂತ ಹೆಚ್ಚಿನ ರಿಟರ್ನ್ಸ್‌ ನೀಡುವ ಭರವಸೆ ನೀಡುವ ಹಾಗೂ ಅಷ್ಟೇನೂ ರಿಸ್ಕ್ ಇಲ್ಲ ಎಂದು ಹೇಳುವ ಹೂಡಿಕೆ ಯೋಜನೆಗಳಿಗೆ ಹೂಡಿಕೆದಾರರನ್ನು ಆಕರ್ಷಿಸಿದ ಹಲವು ಘಟನೆಗಳಿವೆ. ಇಂತಹ ಅನಿಯಂತ್ರಿತ ಹೂಡಿಕೆ ಸ್ಕೀಮ್‌ಗಳನ್ನು ಪಾಂಜಿ ಸ್ಕೀಮ್‌ಗಳು ಎಂದು ಕರೆಯಲಾಗುತ್ತದೆ ಮತ್ತು ಅವು ಭಾರಿ ರಿಸ್ಕ್ ಹೊಂದಿರುತ್ತವೆ. ಅನಿಯಂತ್ರಿತ ಡೆಪಾಸಿಟ್ ಸ್ಕೀಮ್‌ಗಳು ಎಂದರೆ, ವ್ಯಕ್ತಿಗಳು, ವ್ಯಕ್ತಿಗಳ ಸಮೂಹ ಅಥವಾ ವ್ಯಾಪಾರ ಉದ್ದೇಶಕ್ಕೆ ಕಂಪನಿಯು ತೆಗೆದುಕೊಂಡ ಡೆಪಾಸಿಟ್ ಸ್ಕೀಮ್‌ಗಳಾಗಿದ್ದು, ಭಾರತದಲ್ಲಿ ಎಲ್ಲ ರೀತಿಯ ಡೆಪಾಸಿಟ್ ಸ್ಕೀಮ್‌ಗಳ ಮೇಲ್ವಿಚಾರಣೆ ಮಾಡಲು ಇರುವ ಒಂಬತ್ತು ನಿಯಂತ್ರಕ ಪ್ರಾಧಿಕಾರಗಳ ಪೈಕಿ ಯಾವುದರಲ್ಲೂ ನೋಂದಣಿ ಮಾಡಿಕೊಂಡಿರುವುದಿಲ್ಲ. ಈ ಸ್ಕೀಮ್‌ಗಳು ಸಾಮಾನ್ಯವಾಗಿ ತುಂಬಾ ಹೆಚ್ಚು ರಿಸ್ಕ್ ಹೊಂದಿರುತ್ತವೆ ಅಥವಾ ರಿಸ್ಕ್‌ ಅನ್ನೇ ಹೊಂದಿರುವುದಿಲ್ಲ.

ಸಾವಿರಾರು ಹೂಡಿಕೆದಾರರು ಇಂತಹ ಹಲವು ಅನಿಯಂತ್ರಿತ ಡೆಪಾಸಿಟ್ ಸ್ಕೀಮ್‌ಗಳಲ್ಲಿ ತಮ್ಮ ಕಠಿಣ ಪರಿಶ್ರಮದ ಹಣವನ್ನು ಕಳೆದುಕೊಂಡಿದ್ದಾರೆ ಮತ್ತು ಇದರಿಂದಾಗಿ 2019 ರಲ್ಲಿ ಅನಿಯಂತ್ರಿತ ಡೆಪಾಸಿಟ್ ಸ್ಕೀಮ್‌ಗಳ ನಿಷೇಧ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿತು. ಈ ಕಾಯ್ದೆಯು ನಿಯಂತ್ರಿತ ಠೇವಣಿ ಯೋಜನೆಗಳನ್ನು ಪಟ್ಟಿ ಮಾಡುತ್ತದೆ ಮತ್ತು ಮ್ಯೂಚುಯಲ್ ಫಂಡ್‌ಗಳು ಮತ್ತು ಪೋರ್ಟ್ಫೋಲಿಯೋ ಮ್ಯಾನೇಜ್‌ಮೆಂಟ್ ಸೇವೆಗಳಂತಹ (ಪಿಎಂಎಸ್) ಹೂಡಿಕೆ ಆಯ್ಕೆಗಳನ್ನು ಒಳಗೊಂಡಿರುತ್ತದೆ. ಇವುಗಳನ್ನು ಸಾಂಪ್ರದಾಯಿಕವಾಗಿ ಠೇವಣಿ ಯೋಜನೆಗಳೆಂದು ಪರಿಗಣಿಸಲಾಗುವುದಿಲ್ಲ.

ಅತಿ ಕಡಿಮೆ ರಿಸ್ಕ್ ಹೊಂದಿದ್ದು, ತುಂಬಾ ಆಕರ್ಷಕವಾಗಿ

ಇನ್ನಷ್ಟು ಓದಿ

ಮ್ಯೂಚುವಲ್‌ ಫಂಡ್‌ ಸೂಕ್ತವೇ??