ಮ್ಯೂಚುವಲ್ ಫಂಡ್ಗಳು, ಅವುಗಳ ಕಾರ್ಯಕ್ಷಮತೆ, ಎನ್ಎವಿಗಳು ಮತ್ತು ರ್ಯಾಂಕಿಂಗ್ಗಳನ್ನು ನೋಡುವಾಗ ಆರ್.ಎಸ್.ಟಿ ಬ್ಲ್ಯೂಚಿಪ್ ಫಂಡ್ ಅಥವಾ ಎಕ್ಸ್ವೈಝೆಡ್ ಲಾರ್ಜ್ ಕ್ಯಾಪ್ ಫಂಡ್ ಎಂಬಂತಹ ಫಂಡ್ ಹೆಸರುಗಳನ್ನು ನೀವು ನೋಡಿರಬಹುದು. ಬ್ಲ್ಯೂಚಿಪ್ ಫಂಡ್ ಮತ್ತು ಲಾರ್ಜ್ ಕ್ಯಾಪ್ ಫಂಡ್ ಅನ್ನು ಪರಸ್ಪರ ಬಳಕೆ ಮಾಡಲಾಗುತ್ತದೆ. ಯಾಕೆಂದರೆ, ಸ್ಟಾಕ್ ಎಕ್ಸ್ಚೇಂಜ್ಗಳಲ್ಲಿ ಲಿಸ್ಟ್ ಆಗಿರುವ ಲಾರ್ಜ್ ಕ್ಯಾಪ್ ಕಂಪನಿಗಳ ಸ್ಟಾಕ್ಗಳಲ್ಲಿ ಹೂಡಿಕೆ ಮಾಡಿರುವ ಮ್ಯೂಚುವಲ್ ಫಂಡ್ಗಳನ್ನೇ ಇವೆರಡೂ ಉಲ್ಲೇಖಿಸುತ್ತವೆ.
2018 ಜೂನ್ನಲ್ಲಿ ಜಾರಿಗೆ ಬಂದ 2017 ಅಕ್ಟೋಬರ್ನಲ್ಲಿ ವಿತರಿಸಿದ ಸೆಬಿಯ ಉತ್ಪನ್ನ ವರ್ಗೀಕರಣ ಸುತ್ತೋಲೆಯನ್ನು ನೀವು ನೋಡಿದರೆ, ಈಕ್ವಿಟಿ ಫಂಡ್ ವಿಭಾಗದಲ್ಲಿ ಬ್ಲ್ಯೂಚಿಪ್ ಫಂಡ್ಗಳ ಉಲ್ಲೇಖ ಇರುವುದಿಲ್ಲ. ಅಂದರೆ, ನಮ್ಮಲ್ಲಿ ಈಗ ಬ್ಲ್ಯೂಚಿಪ್ ಫಂಡ್ಗಳು ಇಲ್ಲ ಎಂದರ್ಥವೇ? ಇಲ್ಲ. ಹೆಸರು ಏನೇ ಇರಲಿ, ಮಾರ್ಕೆಟ್ ಬಂಡವಾಳದ ಪ್ರಕಾರ ಅಗ್ರ 100 ಲಿಸ್ಟೆಡ್ ಕಂಪನಿಗಳಲ್ಲಿ ಫಂಡ್ ಹೂಡಿಕೆ ಮಾಡುವವರೆಗೂ ಇದನ್ನು ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್ ಎಂದೇ ವರ್ಗೀಕರಿಸಲಾಗುತ್ತದೆ.
ಭಾರತದಲ್ಲಿ ವಿವಿಧ ಎಕ್ಸ್ಚೇಂಜ್ಗಳಲ್ಲಿ ಹಲವು ಸಾರ್ವಜನಿಕವಾಗಿ ಲಿಸ್ಟ್ ಆದ ಕಂಪನಿಗಳಿವೆ. ಸಂಪೂರ್ಣ ಮಾರ್ಕೆಟ್ ಬಂಡವಾಳದ ಪ್ರಕಾರ ಭಾರತದಲ್ಲಿನ ಅಗ್ರ 100 ಸಾರ್ವಜನಿಕ ಲಿಸ್ಟೆಡ್ ಕಂಪನಿಗಳನ್ನು ಲಾರ್ಜ್ ಕ್ಯಾಪ್ ಉಲ್ಲೇಖಿಸುತ್ತದೆ (ಮಾರ್ಕೆಟ್ ಬಂಡವಾಳ = ಸಾರ್ವಜನಿಕವಾಗಿ ಲಿಸ್ಟೆಡ್ ಷೇರುಗಳು * ಪ್ರತಿ ಷೇರಿನ ಬೆಲೆ).
ಸಾರ್ವಜನಿಕವಾಗಿ ಲಿಸ್ಟ್ ಮಾಡಿದ ಆರ್ಥಿಕತೆಯ ಅತಿದೊಡ್ಡ ಕಂಪನಿಗಳ ಸ್ಟಾಕ್ಗಳನ್ನು
ಇನ್ನಷ್ಟು ಓದಿ