ಗೋಲ್ಡ್ ಇಟಿಎಫ್‌ ಎಂದರೇನು ಮತ್ತು ಅದರಲ್ಲಿ ನೀವು ಹೂಡಿಕೆ ಮಾಡುವುದು ಹೇಗೆ?

ಗೋಲ್ಡ್ ಇಟಿಎಫ್‌ ಮತ್ತು ಭೌತಿಕ ಚಿನ್ನದ zoom-icon

ಗೋಲ್ಡ್ ಇಟಿಎಫ್‌ ಎಂದರೆ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್ ಆಗಿದ್ದು, ದೇಶೀಯ ಭೌತಿಕ ಚಿನ್ನದ ಬೆಲೆಯನ್ನು ಇದು ಹಿಂಬಾಲಿಸುವ ಗುರಿಯನ್ನು ಹೊಂದಿರುತ್ತದೆ. ಇದು ಪರೋಕ್ಷ ಹೂಡಿಕೆ ಸಲಕರಣೆಯಾಗಿದ್ದು, ಪ್ರಸ್ತುತ ಚಿನ್ನದ ಬೆಲೆಗೆ ಅನುಗುಣವಾಗಿ ಚಿನ್ನದ ಬುಲಿಯನ್‌ನಲ್ಲಿ ಹೂಡಿಕೆ ಮಾಡುತ್ತದೆ. ಹೀಗಾಗಿ, ಸರಳವಾಗಿ ಹೇಳುವುದಾದರೆ, ಗೋಲ್ಡ್ ಇಟಿಎಫ್‌ಗಳು ಭೌತಿಕ ಚಿನ್ನವನ್ನು (ಕಾಗದ ಅಥವಾ ಡಿಮಟೀರಿಯಲೈಸ್ ಆದ ರೂಪದಲ್ಲಿ) ಪ್ರತಿನಿಧಿಸುತ್ತವೆ. 

1 ಯುನಿಟ್ ಚಿನ್ನದ ಇಟಿಎಫ್‌ = 1 ಗ್ರಾಮ್ ಚಿನ್ನ.

ಯಾವುದೇ ಒಂದು ಕಂಪನಿ ಸ್ಟಾಕ್‌ ರೀತಿಯಲ್ಲೇ ಗೋಲ್ಡ್ ಇಟಿಎಫ್‌ ಭಾರತೀಯ ಸ್ಟಾಕ್ ಎಕ್ಸ್‌ಚೇಂಜ್‌ಗಳಲ್ಲಿ ಟ್ರೇಡ್ ಆಗುತ್ತದೆ. ಒಬ್ಬ ಹೂಡಿಕೆದಾರ ಸ್ಟಾಕ್‌ ಟ್ರೇಡ್ ಮಾಡುವ ಹಾಗೆಯೇ ನೀವು ಕೂಡಾ ಚಿನ್ನದ ಇಟಿಎಫ್‌ಗಳನ್ನು ಟ್ರೇಡ್ ಮಾಡಬಹುದು.

ಗೋಲ್ಡ್ ಇಟಿಎಫ್‌ಗಳು ಸಾಮಾನ್ಯವಾಗಿ ಎನ್‌ಎಸ್‌ಇ (ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌) ಮತ್ತು ಬಿಎಸ್‌ಇಯಲ್ಲಿ (ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್) ಲಿಸ್ಟ್ ಆಗಿರುತ್ತದೆ ಮತ್ತು ಟ್ರೇಡ್ ಆಗಿರುತ್ತದೆ. ಇವುಗಳನ್ನು ಕ್ಯಾಶ್‌ ಸೆಗ್ಮೆಂಟ್‌ನಲ್ಲಿ ಟ್ರೇಡ್ ಮಾಡಲಾಗುತ್ತದೆ ಮತ್ತು ಮಾರ್ಕೆಟ್‌ ದರದಲ್ಲಿ ಇದನ್ನು ಖರೀದಿ ಮತ್ತು ಮಾರಾಟ ಮಾಡಬಹುದಾಗಿದೆ. 

ಗೋಲ್ಡ್ ಇಟಿಎಫ್‌ಗಳನ್ನು ನೇರವಾಗಿ ಖರೀದಿ ಮಾಡಲು ನೀವು ಸ್ಟಾಕ್ ಬ್ರೋಕರ್ ಮೂಲಕ ಡಿಮ್ಯಾಟ್ ಅಕೌಂಟ್ ತೆರೆಯಬೇಕು. ಇದರ ನಂತರ, ಷೇರುಗಳನ್ನು ಖರೀದಿ ಮಾಡುವಂತೆಯೇ, ನೇರವಾಗಿ ಚಿನ್ನದ ಇಟಿಎಫ್‌ಗಳನ್ನು ಖರೀದಿ ಮಾಡಬಹುದು. 

ಈ ಪ್ರಕ್ರಿಯೆಯನ್ನು ಇಲ್ಲಿ ವಿವರವಾಗಿ ತಿಳಿಸಲಾಗಿದೆ:

  • ಸ್ಟಾಕ್‌ಬ್ರೋಕರ್ ಸಲಹೆ ಪಡೆಯಿರಿ ಮತ್ತು ಆನ್‌ಲೈನ್‌ ಟ್ರೇಡಿಂಗ್ ಮತ್ತು
ಇನ್ನಷ್ಟು ಓದಿ

ಮ್ಯೂಚುವಲ್‌ ಫಂಡ್‌ ಸೂಕ್ತವೇ??