ಕೆವೈಸಿಯನ್ನು ಏಕೆ ಹಣಕಾಸು ಮಾರುಕಟ್ಟೆಗಳಲ್ಲಿ ಪರಿಚಯಿಸಲಾಗಿದೆ?

ಕೆವೈಸಿಯನ್ನು ಏಕೆ ಹಣಕಾಸು ಮಾರುಕಟ್ಟೆಗಳಲ್ಲಿ ಪರಿಚಯಿಸಲಾಗಿದೆ?

ಹಣಕಾಸು ಮಾರುಕಟ್ಟೆಯಲ್ಲಿ ಕೆವೈಸಿ ಅನ್ನು   ಪರಿಚಯಿಸಿದ ಒಂದು ಮುಖ್ಯ ಉದ್ದೇಶವೆಂದರೆ, ಮೋಸ, ತೆರಿಗೆ ವಂಚನೆ ಮತ್ತು ಹಣ ದುರ್ಬಳಕೆಯನ್ನು ತಡೆಯುವುದು/ಮಿತಿಗೊಳಿಸುವುದಾಗಿದೆ. ಇದನ್ನು ಮಾಡಲು, ಹಣಕಾಸು ವಹಿವಾಟಿನ ಮೂಲ ಮತ್ತು ಗುರಿಯನ್ನು ಕಂಡುಕೊಳ್ಳಬೇಕಾಗುತ್ತದೆ. ಇದೇ ಕಾರಣಕ್ಕೆ ಕೆವೈಸಿ ಅನ್ನು ಸಶಕ್ತಗೊಳಿಸಲಾಗಿದೆ ಮತ್ತು ಹೂಡಿಕೆ ಮತ್ತು ಬ್ಯಾಂಕ್‌ ಖಾತೆಗಳ ವಿಚಾರದಲ್ಲಿ ಈ ಪ್ರಕ್ರಿಯೆಗಳು ಕಡ್ಡಾಯವಾಗಿವೆ ಮತ್ತು ಕಟ್ಟುನಿಟ್ಟಾಗಿವೆ.

ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ಇಡೀ ಷೇರು ಮಾರುಕಟ್ಟೆಗಳಿಗೆ ಒಂದೇ ಕೆವೈಸಿ ಅಂದರೆ ಸಿಕೆವೈಸಿ ಅನ್ನು ಪರಿಚಯಿಸುವ ಮೂಲಕ ಹೂಡಿಕೆದಾರರಿಗೆ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವುದನ್ನು ಸುಲಭಗೊಳಿಸಿದೆ. ಇದನ್ನು ನೀವು ಪೂರ್ತಿಗೊಳಿಸಿದ ನಂತರ, ಯಾವುದೇ ಷೇರು ಮಾರುಕಟ್ಟೆ ಉತ್ಪನ್ನವನ್ನು ನೀವು ಖರೀದಿ ಮಾಡಬಹುದು ಅಥವಾ ಮಾರಾಟ ಮಾಡಬಹುದು.

436

ಮ್ಯೂಚುವಲ್‌ ಫಂಡ್‌ ಸೂಕ್ತವೇ??