ಒಮ್ಮೆ ಇದನ್ನು ಊಹಿಸಿಕೊಳ್ಳಿ: ಯಾವ ವೇಗದಲ್ಲಿ ವಾಹನಗಳು ಓಡುತ್ತವೆ?
ಎಲ್ಲ ವಿಭಾಗಕ್ಕೂ ಉತ್ತರವನ್ನು ನೀವು ಒಂದೇ ರೀತಿ ಹೇಳಬಹುದೇ? ವಿಭಿನ್ನ ವಾಹನಗಳು ವಿಭಿನ್ನ ವೇಗದಲ್ಲಿ ಓಡುತ್ತವೆ. ಅಷ್ಟಕ್ಕೂ ಒಂದೇ ವಿಭಾಗದಲ್ಲೇ ಅಂದರೆ ಎಲ್ಲ ಕಾರುಗಳೂ ಒಂದೇ ರೀತಿ ಓಡುವುದಿಲ್ಲ. ನಗರದ ರಸ್ತೆಗಳಿಗೆಂದೇ ರೂಪಿಸಿದ ಕಾರುಗಳು ನಿರ್ದಿಷ್ಟ ಗರಿಷ್ಠ ವೇಗದಲ್ಲಿ ಓಡಬಹುದು. ಆದರೆ ರೇಸಿಂಗ್ ಕಾರುಗಳು ಇವುಗಳಿಗಿಂತ ವೇಗವಾಗಿ ಓಡುತ್ತವೆ.
ಮ್ಯೂಚುವಲ್ ಫಂಡ್ ಎಂಬುದು ಒಂದೇ ಉತ್ಪನ್ನವಲ್ಲ. ಮ್ಯೂಚುವಲ್ ಫಂಡ್ಗಳಲ್ಲಿ ಹಲವು ವಿಧಗಳಿವೆ. ವಿಭಿನ್ನ ವಿಭಾಗದಲ್ಲಿ ಮಾಡಿದ ಹೂಡಿಕೆಯು ವಿಭಿನ್ನ ರಿಟರ್ನ್ಸ್ ನೀಡುತ್ತವೆ ಮತ್ತು ಪರ್ಫಾರ್ಮೆನ್ಸ್ನಲ್ಲಿ ಅಧಿಕ ಪ್ರಮಾಣದ ಅಸ್ಥಿರತೆಗೆ ಕಾರಣವಾಗುವ ಕೆಲವು ವಿಭಾಗಗಳೂ ಇವೆ.
ಬೆಲೆ ತುಂಬಾ ಏರಿಳಿತ ಕಾಣುವ ಮಾರ್ಕೆಟ್ನಲ್ಲಿ ಫಂಡ್ ಹೂಡಿಕೆ ಮಾಡಿದರೆ, ಫಂಡ್ನ ನೆಟ್ ಅಸೆಟ್ ವ್ಯಾಲ್ಯೂ (ಎನ್ಎವಿ) ಭಾರಿ ಏರಿಳಿತಗಳನ್ನು ಕಾಣಬಹುದು (ಉದಾ., ಈಕ್ವಿಟಿ ಮಾರ್ಕೆಟ್ನಲ್ಲಿ ಹೂಡಿಕೆ ಮಾಡುವ ಗ್ರೋತ್ ಫಂಡ್ಗಳು); ಆದರೆ ಹೆಚ್ಚು ಬೆಲೆ ಏರಿಳಿತ ಕಾಣದ ಮಾರ್ಕೆಟ್ನಲ್ಲಿ ಅದು ಹೂಡಿಕೆ ಮಾಡಿದರೆ ನೆಟ್ ಅಸೆಟ್ ವ್ಯಾಲ್ಯೂ (ಎನ್ಎವಿ) ಸ್ಥಿರವಾಗಿರುತ್ತದೆ (ಉದಾ, ಹಣದ ಮಾರ್ಕೆಟ್ನಲ್ಲಿ ಹೂಡಿಕೆ ಮಾಡುವ ಲಿಕ್ವಿಡ್ ಫಂಡ್ಗಳು). ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಈಕ್ವಿಟಿ ಫಂಡ್ಗೆ ಹೋಲಿಸಿದರೆ ಲಿಕ್ವಿಡ್ ಫಂಡ್ಗಳು ಅತಿ ಕಡಿಮೆ ಅನಿಶ್ಚಿತತೆಯನ್ನು ಹೊಂದಿರುತ್ತವೆ
ಫಂಡ್ನ ಲಕ್ಷಣಗಳ ಮೇಲೆ ಹೂಡಿಕೆದಾರರು ಗಮನ ಹರಿಸಬೇಕು ಮತ್ತು ಇದನ್ನು ತಮ್ಮ ಅಗತ್ಯಕ್ಕೆ ಹೊಂದಿಕೆ ಮಾಡಿಕೊಳ್ಳಬೇಕು.