ಫಿಕ್ಸೆಡ್ ಇನ್‌ಕಮ್‌ ಮ್ಯೂಚುವಲ್ ಫಂಡ್ಸ್‌ನಲ್ಲಿ ಯಾಕೆ ಹೂಡಿಕೆ ಮಾಡಬೇಕು?

ಫಿಕ್ಸೆಡ್ ಇನ್‌ಕಮ್‌ ಮ್ಯೂಚುವಲ್ ಫಂಡ್ಸ್‌ನಲ್ಲಿ ಯಾಕೆ ಹೂಡಿಕೆ ಮಾಡಬೇಕು? zoom-icon

ಫಿಕ್ಸೆಡ್‌ ಇನ್‌ಕಮ್‌ ಮ್ಯೂಚುವಲ್ ಫಂಡ್ (ಮ್ಯೂಚುವಲ್ ಫಂಡ್‌ನ ಒಂದು ರೂಪ) ಎಂಬುದು ಆ ಫಂಡ್‌ನ ಅಸೆಟ್ ಅಲೊಕೇಶನ್‌ ಮತ್ತು ಸೆಬಿ ಅನುಮತಿ ನೀಡಿದ ಮಾರ್ಗಸೂಚಿಗಳು ಮತ್ತು ಮಿತಿಗಳಿಗೆ ಅನುಗುಣವಾಗಿ ಹೂಡಿಕೆಯನ್ನು ಕಾರ್ಪೊರೇಟ್ ಬಾಂಡ್‌ಗಳು, ಸರ್ಕಾರಿ ಬಾಂಡ್‌ಗಳು, ಮನಿ ಮಾರ್ಕೆಟ್ ಸಲಕರಣೆಗಳು ಮತ್ತು ಇತರ ಡೆಟ್ ಸೆಕ್ಯುರಿಟಿಗಳಂತಹ ಫಿಕ್ಸೆಡ್ ಇನ್‌ಕಮ್‌ ಅಸೆಟ್‌ಗಳಲ್ಲಿ ಹಾಕುತ್ತದೆ.  ಬಡ್ಡಿ ಮತ್ತು ಬಂಡವಾಳ ಬೆಳವಣಿಗೆಯ ಮೂಲಕ ರಿಟರ್ನ್ ಗಳಿಸುವ ಗುರಿಯನ್ನು ಇದು ಹೊಂದಿರುತ್ತದೆ. ಈ ಅನುಕೂಲವು ವಿಭಿನ್ನ ಹೂಡಿಕೆ ಉದ್ದೇಶಗಳು ಮತ್ತು ರಿಸ್ಕ್ ಸಹಿಸಿಕೊಳ್ಳುವಿಕೆಗೆ ಹೊಂದಿಕೊಳ್ಳುತ್ತದೆ. ಫಿಕ್ಸೆಡ್ ಇನ್‌ಕಮ್ ಮ್ಯೂಚುವಲ್ ಫಂಡ್‌ಗಳನ್ನು ಡೆಟ್ ಅಥವಾ ಬಾಂಡ್ ಫಂಡ್‌ಗಳು ಎಂದೂ ಕರೆಯಲಾಗುತ್ತದೆ.

ಫಿಕ್ಸೆಡ್ ಇನ್‌ಕಮ್‌ ಮ್ಯೂಚುವಲ್ ಫಂಡ್‌ಗಳು ಹೂಡಿಕೆದಾರರಿಗೆ ಈ ರೀತಿಯ ಹಲವು ವೈಶಿಷ್ಟ್ಯಗಳನ್ನು ಒದಗಿಸುತ್ತವೆ, ಅವುಗಳೆಂದರೆ:

  • ವೈವಿಧ್ಯತೆ: ವಿವಿಧ ಸರ್ಕಾರಿ ಮತ್ತು ಕಾರ್ಪೊರೇಟ್ ಬಾಂಡ್‌ಗಳಲ್ಲಿ ಹೂಡಿಕೆಗಳನ್ನು ಹರಡುವ ಮೂಲಕ ಡೈವರ್ಸಿಫಿಕೇಶನ್ ಅನ್ನು ಈ ಫಂಡ್‌ಗಳು ಒದಗಿಸುತ್ತವೆ ಮತ್ತು ಒಟ್ಟಾರೆ ಪೋರ್ಟ್‌ಫೋಲಿಯೋ ರಿಸ್ಕ್ ಅನ್ನು ಕಡಿಮೆ ಮಾಡುತ್ತವೆ.
  • ಲಿಕ್ವಿಡಿಟಿ: ಓಪನ್ ಎಂಡೆಡ್ ಫಿಕ್ಸೆಡ್ ಇನ್‌ಕಮ್‌ ಫಂಡ್‌ಗಳು ಲಿಕ್ವಿಡೇಶನ್‌ಗೆ ಅನುವು ಮಾಡುತ್ತವೆ, ಅದರಲ್ಲೂ ವಿಶೇಷವಾಗಿ ತುರ್ತು ಸನ್ನಿವೇಶದಲ್ಲಿ ಇವು ಹೆಚ್ಚು ಅನುಕೂಲಕರ. ಏಕೆಂದರೆ, ಇವು ಲಾಕ್ ಇನ್ ಅವಧಿಯನ್ನು ಹೊಂದಿರುವುದಿಲ್ಲ.
  • ತುಲನಾತ್ಮಕವಾಗಿ ಕಡಿಮೆ ರಿಸ್ಕ್‌: ಈ ಫಂಡ್‌ಗಳನ್ನು ಸಾಮಾನ್ಯವಾಗಿ ಕಡಿಮೆಯಿಂದ ಮಧ್ಯಮ ರಿಸ್ಕ್‌ನವು ಎಂದು ಪರಿಗಣಿಸಲಾಗಿದೆ. ಆದರೆ, ಇವು ಸಂಪೂರ್ಣವಾಗಿ
ಇನ್ನಷ್ಟು ಓದಿ
285

ಮ್ಯೂಚುವಲ್‌ ಫಂಡ್‌ ಸೂಕ್ತವೇ??