ಫಿಕ್ಸೆಡ್ ಇನ್‌ಕಮ್ ಮ್ಯೂಚುವಲ್ ಫಂಡ್ (ಮ್ಯೂಚುವಲ್ ಫಂಡ್‌ನ ಒಂದು ರೂಪ) ಎಂಬುದು ಆ ಫಂಡ್‌ನ ಅಸೆಟ್ ಅಲೊಕೇಶನ್ ಮತ್ತು ಸೆಬಿ ಅನುಮತಿ ನೀಡಿದ ಮಾರ್ಗಸೂಚಿಗಳು ಮತ್ತು ಮಿತಿಗಳಿಗೆ ಅನುಗುಣವಾಗಿ ಹೂಡಿಕೆಯನ್ನು ಕಾರ್ಪೊರೇಟ್ ಬಾಂಡ್‌ಗಳು, ಸರ್ಕಾರಿ ಬಾಂಡ್‌ಗಳು, ಮನಿ ಮಾರ್ಕೆಟ್ ಸಲಕರಣೆಗಳು ಮತ್ತು ಇತರ ಡೆಟ್ ಸೆಕ್ಯುರಿಟಿಗಳಂತಹ ಫಿಕ್ಸೆಡ್ ಇನ್‌ಕಮ್ ಅಸೆಟ್‌ಗಳಲ್ಲಿ ಹಾಕುತ್ತದೆ. ಬಡ್ಡಿ ಮತ್ತು ಬಂಡವಾಳ ಬೆಳವಣಿಗೆಯ ಮೂಲಕ ರಿಟರ್ನ್ ಗಳಿಸುವ ಗುರಿಯನ್ನು ಇದು ಹೊಂದಿರುತ್ತದೆ. ಈ ಅನುಕೂಲವು ವಿಭಿನ್ನ ಹೂಡಿಕೆ ಉದ್ದೇಶಗಳು ಮತ್ತು ರಿಸ್ಕ್ ಸಹಿಸಿಕೊಳ್ಳುವಿಕೆಗೆ ಹೊಂದಿಕೊಳ್ಳುತ್ತದೆ. ಫಿಕ್ಸೆಡ್ ಇನ್‌ಕಮ್ ಮ್ಯೂಚುವಲ್ ಫಂಡ್‌ಗಳನ್ನು ಡೆಟ್ ಅಥವಾ ಬಾಂಡ್ ಫಂಡ್‌ಗಳು ಎಂದೂ ಕರೆಯಲಾಗುತ್ತದೆ.
ಫಿಕ್ಸೆಡ್ ಇನ್‌ಕಮ್ ಮ್ಯೂಚುವಲ್ ಫಂಡ್‌ಗಳು ಹೂಡಿಕೆದಾರರಿಗೆ ಈ ರೀತಿಯ ಹಲವು ವೈಶಿಷ್ಟ್ಯಗಳನ್ನು ಒದಗಿಸುತ್ತವೆ, ಅವುಗಳೆಂದರೆ:
- ವೈವಿಧ್ಯತೆ: ವಿವಿಧ ಸರ್ಕಾರಿ ಮತ್ತು ಕಾರ್ಪೊರೇಟ್ ಬಾಂಡ್‌ಗಳಲ್ಲಿ ಹೂಡಿಕೆಗಳನ್ನು ಹರಡುವ ಮೂಲಕ ಡೈವರ್ಸಿಫಿಕೇಶನ್ ಅನ್ನು ಈ ಫಂಡ್‌ಗಳು ಒದಗಿಸುತ್ತವೆ ಮತ್ತು ಒಟ್ಟಾರೆ ಪೋರ್ಟ್‌ಫೋಲಿಯೋ ರಿಸ್ಕ್ ಅನ್ನು ಕಡಿಮೆ ಮಾಡುತ್ತವೆ.
- ಲಿಕ್ವಿಡಿಟಿ: ಓಪನ್ ಎಂಡೆಡ್ ಫಿಕ್ಸೆಡ್ ಇನ್ಕಮ್ ಫಂಡ್‌ಗಳು ಲಿಕ್ವಿಡೇಶನ್‌ಗೆ ಅನುವು ಮಾಡುತ್ತವೆ, ಅದರಲ್ಲೂ ವಿಶೇಷವಾಗಿ ತುರ್ತು ಸನ್ನಿವೇಶದಲ್ಲಿ ಇವು ಹೆಚ್ಚು ಅನುಕೂಲಕರ. ಏಕೆಂದರೆ, ಇವು ಲಾಕ್ ಇನ್ ಅವಧಿಯನ್ನು ಹೊಂದಿರುವುದಿಲ್ಲ.
- ತುಲನಾತ್ಮಕವಾಗಿ ಕಡಿಮೆ ರಿಸ್ಕ್: ಈ ಫಂಡ್‌ಗಳನ್ನು ಸಾಮಾನ್ಯವಾಗಿ ಕಡಿಮೆಯಿಂದ ಮಧ್ಯಮ ರಿಸ್ಕ್‌ನವು ಎಂದು ಪರಿಗಣಿಸಲಾಗಿದೆ. ಆದರೆ, ಇವು ಸಂಪೂರ್ಣವಾಗಿ ರಿಸ್ಕ್ ರಹಿತವೂ ಅಲ್ಲ.
- ಹೆಚ್ಚುವರಿ ಆದಾಯ: ಫಿಕ್ಸೆಡ್ ಇನ್ಕಮ್ ಫಂಡ್‌ಗಳು ಹೆಚ್ಚುವರಿ ನಗದು ಹರಿವಿನ ಮೂಲವನ್ನು ಒದಗಿಸುತ್ತವೆ. ಅದರಲ್ಲೂ ವಿಶೇಷವಾಗಿ ಸಿಸ್ಟಮ್ಯಾಟಿಕ್ ವಿತ್‌ಡ್ರಾ ಪ್ಲಾನ್‌ಗಳ ಮೂಲಕ ಇವು ಈ ಅನುಕೂಲವನ್ನು ನೀಡುತ್ತವೆ. ನಿಮ್ಮ ಪ್ರಾಥಮಿಕ ಗಳಿಕೆಗಳಿಗೆ ಪೂರಕವಾಗಿ ಮ್ಯಾನೇಜ್‌ಮೆಂಟ್ ಫೀಗಳೂ ಇರುತ್ತವೆ ಮತ್ತು ಒಟ್ಟಾರೆ ಹಣಕಾಸು ಸ್ಥಿರತೆಯನ್ನೂ ಹೆಚ್ಚಿಸುತ್ತದೆ.
- ನಿವೃತ್ತಿ ಯೋಜನೆ: ನಿವೃತ್ತಿ ಯೋಜನೆಯಲ್ಲಿ ಪ್ರಮುಖ ಅಂಶವಾಗಿ ಈ ಫಂಡ್‌ಗಳು ಕೆಲಸ ಮಾಡಬಲ್ಲವು.ಇದನ್ನು ಬಳಸಿ ನೀವು ಕಡಿಮೆ ರಿಸ್ಕ್, ಕಡಿಮೆ ರಿಟರ್ನ್ ಆದಾಯ ನೀಡುವ, ನಿವೃತ್ತಿ ವರ್ಷಗಳಿಗೆ ನೀವು ಆದಾಯವನ್ನು ಪಡೆಯಬಹುದು ಮತ್ತು ಇದಕ್ಕೆ ನೀವು ಸಿಸ್ಟಮ್ಯಾಟಿಕ್ ವಿತ್‌ಡ್ರಾವಲ್ ಪ್ಲಾನ್‌ಗಳನ್ನು ಬಳಸಬಹುದು. ಇದು ಮಾರ್ಕೆಟ್ ರಿಸ್ಕ್‌ಗಳು ಮತ್ತು ಫಂಡ್‌ನ ಪರ್ಫಾರ್ಮೆನ್ಸ್ ಒಳಪಟ್ಟಿರುತ್ತದೆ.
ರಿಸ್ಕ್ ಸಹಿಸಿಕೊಳ್ಳದ ಹೂಡಿಕೆದಾರರಿಗೆ ಫಿಕ್ಸೆಡ್ ಇನ್‌ಕಮ್ ಮ್ಯೂಚುವಲ್ ಫಂಡ್‌ಗಳು ಆಕರ್ಷಕವಾಗಿವೆ. ಅಧಿಕ ರಿಸ್ಕ್ ಹೂಡಿಕೆಗಳ ಬದಲಿಗೆ ಸುಸ್ಥಿರ, ಉತ್ತಮ ರಿಟರ್ನ್ಸ್ ಅನ್ನು ಬಯಸುವ ವ್ಯಕ್ತಿಗಳಿಗೆ ಇವು ಸೂಕ್ತವಾಗಿವೆ.
ಫಿಕ್ಸೆಡ್ ಇನ್ಕಮ್ ಫಂಡ್ಗಳು ಯಾವುದೇ ಗ್ಯಾರಂಟಿ ರಿಟರ್ನ್ ಅನ್ನು ನೀಡುವುದಿಲ್ಲ. ನಿಜವಾದ ರಿಟರ್ನ್‌ಗಳು ಮಾರುಕಟ್ಟೆ ಸ್ಥಿತಿಗತಿ ಮತ್ತು ಇತರ ಅಂಶಗಳನ್ನು ಅವಲಂಬಿಸಿರುತ್ತವೆ ಎಂಬುದನ್ನು ಗಮನಿಸಬೇಕಿರುವುದು ಅತ್ಯಂತ ಮುಖ್ಯವಾಗಿದೆ. ಫಂಡ್ ತಮಗೆ ಸೂಕ್ತವಾಗಿದೆಯೇ ಎಂಬ ಅನುಮಾನಗಳಿದ್ದರೆ ಹೂಡಿಕೆದಾರರು ತಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಬಹುದು.
ಹಕ್ಕು ನಿರಾಕರಣೆ
ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.