ಈಕ್ವಿಟಿ ಮ್ಯೂಚುವಲ್ ಫಂಡ್ಗಳು ಷೇರುಗಳನ್ನುಖರೀದಿ ಮಾಡುತ್ತವೆ ಮತ್ತು ಡೆಟ್ ಫಂಡ್ಗಳು ಡೆಟ್ ಫಂಡ್ ಸೆಕ್ಯುರಿಟಿಗಳಾದ ಬಾಂಡ್ಗಳನ್ನು ತಮ್ಮ ಪೋರ್ಟ್ಫೋಲಿಯೋಗೆ ಖರೀದಿ ಮಾಡುತ್ತವೆ. ಬಾಂಡ್ಗಳಂತಹ ಸೆಕ್ಯುರಿಟಿಗಳನ್ನು ಪವರ್ ಯುಟಿಲಿಟಿಗಳು, ಬ್ಯಾಂಕ್ಗಳು, ಹೌಸಿಂಗ್ ಫೈನಾನ್ಸ್ ಮತ್ತು ಸರ್ಕಾರದಂತಹ ಕಾರ್ಪೊರೇಟ್ಗಳು ಬಿಡುಗಡೆ ಮಾಡುತ್ತವೆ. ಹೊಸ ಪ್ರಾಜೆಕ್ಟ್ಗಳಿಗೆ ಸಾಲ ತೆಗೆದುಕೊಳ್ಳುವುದರ ಬದಲಿಗೆ ಸಾರ್ವಜನಿಕರಿಂದ (ಹೂಡಿಕೆದಾರರು) ಹಣವನ್ನು ಸಂಗ್ರಹಿಸಲು ಖಚಿತ ಬಡ್ಡಿದರದಲ್ಲಿ ಬಾಂಡ್ಗಳನ್ನು ಅವು ವಿತರಿಸುತ್ತವೆ. ಖರೀದಿ ಮಾಡಿದ ಹೂಡಿಕೆದಾರರಿಗೆ ಸಕಾಲಿಕ ಫಿಕ್ಸೆಡ್ ಬಡ್ಡಿಯನ್ನು ಪಾವತಿ ಮಾಡುವ ಭರವಸೆಯೇ ಬಾಂಡ್ಗಳಾಗಿವೆ.
ಕೆಲವು ವರ್ಷಗಳಲ್ಲಿ ಪಕ್ವಗೊಳ್ಳುವುದರೊಂದಿಗೆ ಹೂಡಿಕೆದಾರರು ಬಾಂಡ್ಗಳನ್ನು ಖರೀದಿ ಮಾಡಿದಾಗ, ಅಷ್ಟು ವರ್ಷಗಳಿಗೆ ಅವರು ವಿತರಕರಿಗೆ (ಉದಾ,. ಎಬಿಸಿ ಪವರ್ ಲಿಮಿಟೆಡ್) ಹಣವನ್ನು ಸಾಲ ನೀಡಿರುತ್ತಾರೆ. ಬಾಂಡ್ಗಳಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಪ್ರತಿಯಾಗಿ ಈ ಸಮಯದಲ್ಲಿ ಹೂಡಿಕೆದಾರರಿಗೆ ಸಕಾಲಿಕ ಬಡ್ಡಿಯನ್ನು ಪಾವತಿ ಮಾಡುವ ಭರವಸೆಯನ್ನು ಎಬಿಸಿ ನೀಡುತ್ತದೆ (=ಎಬಿಸಿಗೆ ಸಾಲ ನೀಡಿದ ಹಣಕ್ಕೆ). ಗ್ರಾಹಕರು ಸಾಲ ತೆಗೆದುಕೊಂಡಂತೆಯೇ ಎಬಿಸಿ ಸಾಲಗಾರನಾಗಿರುತ್ತದೆ. ಹೂಡಿಕೆದಾರರು (ನಿಮ್ಮ ಹಣವನ್ನು ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್) ಎಬಿಸಿಗೆ ಸಾಲದಾತ ರಾಗಿರುತ್ತಾರೆ. ಹೋಮ್ ಲೋನ್ ಗ್ರಾಹಕರಿಗೆ ಸಾಲವನ್ನು ನೀಡಿದ ವಿಧಾನವೇ ಇದಾಗಿರುತ್ತದೆ.
ಡೆಟ್ ಫಂಡ್ಗಳು ನಿಮ್ಮ ಹಣವನ್ನು ಹಲವು ಬಾಂಡ್ಗಳು ಮತ್ತು ಇತರ ಡೆಟ್ ಫಂಡ್ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತದೆ.