ಮ್ಯೂಚುವಲ್ ಫಂಡ್ಗಳು ಈಕ್ವಿಟಿ ಅಥವಾ ಡೆಟ್ನಂತಹ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತವೆ. ಮಾರ್ಕೆಟ್ ಬದಲಾಗುತ್ತಿದ್ದಂತೆ ಅವುಗಳ ಮೌಲ್ಯವೂ ಬದಲಾಬಹುದು. ಇದರಿಂದಾಗಿ ಅವುಗಳು ರಿಸ್ಕೀ ಆಗಿರುತ್ತವೆ. ಯಾಕೆಂದರೆ ಫಂಡ್ ಪೋರ್ಟ್ಫೋಲಿಯೋದಲ್ಲಿರುವ ಒಂದೊಂದು ಸೆಕ್ಯುರಿಟಿ ಮೌಲ್ಯವನ್ನೂ ಫಂಡ್ನ ಎನ್ಎವಿ ಅವಲಂಬಿಸಿರುತ್ತದೆ. ಮ್ಯೂಚುವಲ್ಫಂಡ್ಗಳು ವಿಭಿನ್ನ ವಲಯಗಳ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುವುದರಿಂದ, ಅವುಗಳು ಈ ಮಾರ್ಕೆಟ್ರಿಸ್ಕ್ ಅನ್ನು ಚದುರಿಸುತ್ತವೆ. ಒಂದು ಫಂಡ್ಹಲವು ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುವುದರಿಂದ, ಯಾವುದೇ ಒಂದು ದಿನದ ಮೌಲ್ಯದಲ್ಲಿ ಅವೆಲ್ಲವುಗಳ ರಿಸ್ಕ್ಕಡಿಮೆಯಾಗುತ್ತದೆ. ಹೀಗಾಗಿ, ಮ್ಯೂಚುವಲ್ಫಂಡ್ಗಳು ರಿಸ್ಕ್ ಅನ್ನು ಚದುರಿಸುತ್ತವೆ ಎಂಬುದು ನಿಜವಾದರೂ, ಅವು ರಿಸ್ಕ್ ಅನ್ನು ನಿವಾರಿಸುವುದಿಲ್ಲ. ಫಂಡ್ ಮ್ಯಾನೇಜರ್ ಮಾಡುವ ರಿಸ್ಕ್ ಚದುರಿಸುವಿಕೆಯು, ಫಂಡ್ನ ಮಾರ್ಕೆಟ್ರಿಸ್ಕ್ ಅನ್ನು ಚದುರಿಸುವಿಕೆ ವ್ಯಾಪ್ತಿಯವರೆಗೆ ಕಡಿಮೆ ಮಾಡುತ್ತದೆ. ಫಂಡ್ ಹೆಚ್ಚು ಚದುರಿಸುವಿಕೆ ಮಾಡಿದಷ್ಟೂ ರಿಸ್ಕ್ ಕಡಿಮೆಯಾಗುತ್ತದೆ.
ಥೀಮ್ ಅಥವಾ ಸೆಕ್ಟರ್ ಫಂಡ್ಗಳಂತಹ ಕಾನ್ಸಂಟ್ರೇಟೆಡ್ ಫಂಡ್ಗಳು ಮಲ್ಟಿಕ್ಯಾಪ್ ಫಂಡ್ಗಳಿಗಿಂತ ಹೆಚ್ಚು ರಿಸ್ಕ್ಹೊಂದಿರುತ್ತವೆ. ಯಾಕೆಂದರೆ, ಸೂಕ್ತವಲ್ಲದ ಮಾರ್ಕೆಟ್ ಪರಿಸ್ಥಿತಿಯು ಬಾಧಿತ ವಲಯದ ಕಂಪನಿಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಬಾಧಿಸುತ್ತವೆ. ಇದೇ ವೇಳೆ, ಮಲ್ಟಿ ಕ್ಯಾಪ್ ಫಂಡ್ನಲ್ಲಿ ವಿವಿಧ ವಲಯಗಳಲ್ಲಿ ಚದುರಿಸಲಾಗಿರುವುದರಿಂದ, ಕಾರು ಆಕ್ಸಿಡೆಂಟ್ನಲ್ಲಿ ಎರ್ ಬ್ಯಾಗ್ರೀತಿ ಕ್ಯಾಪಿಟಲೈಸೇಶನ್ ಕೆಲಸ ಮಾಡುತ್ತದೆ. ಫಂಡ್ನ ಎನ್ಎವಿಯ ಅಸುರಕ್ಷತೆಯ ಪರಿಣಾಮವನ್ನು ಕಡಿಮೆ ಮಾಡುತ್ತದೆ.
ಮ್ಯೂಚುವಲ್ ಫಂಡ್ಗಳಲ್ಲಿ ನೀವು ಹೂಡಿಕೆ ಮಾಡುವಾಗ, ಫಂಡ್ನ ಸೆಕ್ಟರ್ ಅಲೊಕೇಶನ್ನಲ್ಲಿ ಚದುರಿಸುವಿಕೆಯ ಪ್ರಮಾಣವನ್ನು ನೋಡಿ. ನಿಮ್ಮ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಆಧರಿಸಿ, ನಿಮಗೆ ಸೂಕ್ತವಾಗುವ ಸರಿಯಾದ ರೀತಿಯ ಫಂಡ್ ಅನ್ನು ಆಯ್ಕೆ ಮಾಡಿ.