ಎಸ್‌ಐಪಿ ಹಾಗೂ ಎಸ್‌ಟಿಪಿ – ವ್ಯತ್ಯಾಸ ತಿಳಿಯಿರಿ

ಎಸ್‌ಐಪಿ ಹಾಗೂ ಎಸ್‌ಟಿಪಿ – ವ್ಯತ್ಯಾಸ ತಿಳಿಯಿರಿ

ಸಿಸ್ಟಮ್ಯಾಟಿಕ್ ಟ್ರಾನ್ಸ್‌ಫರ್ ಪ್ಲಾನ್ (ಎಸ್‌ಟಿಪಿ) ಹಾಗೂ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ (ಎಸ್‌ಐಪಿ) ಎರಡರ ಉದ್ದೇಶವೂ ಒಂದೇ ಆಗಿದ್ದು, ನಿರ್ದಿಷ್ಟ ಆವರ್ತನದಲ್ಲಿ ರೆಗ್ಯುಲರ್ ಆಗಿ ಹೂಡಿಕೆ ಮಾಡಲು ಸಹಾಯ ಮಾಡುತ್ತವೆ. ಆದರೆ, ಅವು ಕೆಲಸ ಮಾಡುವ ರೀತಿಯಲ್ಲಿ ವ್ಯತ್ಯಾಸವಿದೆ. ಇವೆರಡನ್ನೂ ನಾವು ಪ್ರತ್ಯೇಕವಾಗಿ ನೋಡೋಣ ಮತ್ತು ಎಸ್‌ಐಪಿ ಮತ್ತು ಎಸ್‌ಟಿಪಿ ಮಧ್ಯೆ ಏನು ವ್ಯತ್ಯಾಸವಿದೆ ಎಂದು ತಿಳಿಯೋಣ.

1. ಎಸ್‌ಐಪಿ: ಎಸ್‌ಐಪಿಗಳು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆಯ ಒಂದು ರೂಪವಾಗಿದೆ. ರೆಗ್ಯುಲರ್ ಅಂತರದಲ್ಲಿ ಅಂದರೆ, ಪ್ರತಿ ದಿನ, ಪ್ರತಿ ವಾರ, ಪ್ರತಿ ತಿಂಗಳು, ಪ್ರತಿ ತ್ರೈಮಾಸಿಕ ಹಾಗೂ ಇತರ ಅಂತರದಲ್ಲಿ ಯಾವುದೇ ಮ್ಯೂಚುವಲ್ ಫಂಡ್ ಸ್ಕೀಮ್‌ನಲ್ಲಿ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಲು ಹೂಡಿಕೆದಾರರಿಗೆ ಅನುವು ಮಾಡುತ್ತದೆ. ಇದು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದಕ್ಕೆ ಹೆಚ್ಚು ಶಿಸ್ತುಬದ್ಧ ಮತ್ತು ವ್ಯವಸ್ಥಿತವಾದ ವಿಧಾನವಾಗಿದೆ.

2. ಎಸ್‌ಟಿಪಿ: ಎಸ್‌ಟಿಪಿ ಎಂಬುದು ಒಂದೇ ಫಂಡ್ ಹೌಸ್‌ನಲ್ಲಿನ ಒಂದು ಮ್ಯೂಚುವಲ್ ಫಂಡ್ ಸ್ಕೀಮ್‌ನಿಂದ ಇನ್ನೊಂದು ಮ್ಯೂಚುವಲ್ ಫಂಡ್ ಸ್ಕೀಮ್‌ಗೆ ವರ್ಗಾವಣೆ ಮಾಡುವ ವಿಧಾನವಾಗಿದೆ. ಎಸ್‌ಟಿಪಿಯಲ್ಲಿ ಮೊದಲೇ ನಿಗದಿಸಿದ ಆವರ್ತನದಲ್ಲಿ ಒಂದು ಮ್ಯೂಚುವಲ್ ಫಂಡ್ ಸ್ಕೀಮ್‌ನಿಂದ ಇನ್ನೊಂದು ಸ್ಕೀಮ್‌ಗೆ ಮೊದಲೇ ನಿಗದಿಪಡಿಸಿದ ಮೊತ್ತವನ್ನು ವರ್ಗಾವಣೆ ಮಾಡಲಾಗುತ್ತದೆ. ಈಗಾಗಲೇ ಒಂದು ಸ್ಕೀಮ್‌ನಲ್ಲಿ ಒಂದಷ್ಟು ಮೊತ್ತವನ್ನು ಹೊಂದಿದ್ದು, ಅಸ್ಥಿರತೆಯನ್ನು ಕಡಿಮೆ ಮಾಡುವುದಕ್ಕಾಗಿ ಹಂತ ಹಂತವಾಗಿ ಹೂಡಿಕೆ ಮಾಡಲು ಬಯಸುವ ಹೂಡಿಕೆದಾರರು ಇದನ್ನು ಹೆಚ್ಚು ಜನಪ್ರಿಯವಾಗಿ ಬಳಸುತ್ತಾರೆ. 

ಈ ಎರಡೂ ಗುಣಲಕ್ಷಣಗಳು ವಿಭಿನ್ನವಾಗಿವೆ. ಹೀಗಾಗಿ, ಸರಳ ಉದಾಹರಣೆಯ ಮೂಲಕ ಎಸ್‌ಐಪಿ ವರ್ಸಸ್‌ ಎಸ್‌ಟಿಪಿ ಅನ್ನು ನಾವು ಅರ್ಥ ಮಾಡಿಕೊಳ್ಳೋಣ ಮತ್ತು ಅವು ಹೇಗೆ ಕೆಲಸ ಮಾಡುತ್ತವೆ ಎಂದು ತಿಳಿಯೋಣ. 

ಎಸ್‌ಐಪಿ ಉದಾ:

ಎಸ್‌ಐಪಿ ರೂಪದಲ್ಲಿ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಲು ಬಯಸುವ ಹೂಡಿಕೆದಾರರು ಮೊದಲು ಸರಿಯಾದ ಮ್ಯೂಚುಯಲ್ ಫಂಡ್ ಅನ್ನು ಆಯ್ಕೆ ಮಾಡಬೇಕು, ಹೂಡಿಕೆ ಆವರ್ತನ (ಅಂದರೆ ಪ್ರತಿ ತಿಂಗಳು) ಆಯ್ಕೆ ಮಾಡಬೇಕು, ತಾನು ಹೂಡಿಕೆ ಮಾಡಲು ಬಯಸಿದ ಮೊತ್ತವನ್ನು ಆಯ್ಕೆ ಮಾಡಬೇಕು (ಉದಾ., ರೂ. 10,000), ಸ್ಕೀಮ್ ಸೆಟಪ್ ಮಾಡಬೇಕು ಮತ್ತು ಆಯ್ಕೆ ಮಾಡಿದ ಫಂಡ್‌ಗೆ ತನ್ನ ಬ್ಯಾಂಕ್ ಅಕೌಂಟ್‌ನಿಂದ ಸ್ವಯಂಚಾಲಿತವಾಗಿ ಡೆಬಿಟ್ ಮಾಡಬೇಕು. ಇದರಿಂದ ಎಸ್‌ಐಪಿ ಮೂಲಕ ಆಯ್ಕೆ ಮಾಡಿದ ಮ್ಯೂಚುವಲ್ ಫಂಡ್ ಸ್ಕೀಮ್‌ನಲ್ಲಿ ರೂ. 10,000 ಹೂಡಿಕೆ ಮಾಡಲು ಇದು ಅನುವು ಮಾಡುತ್ತದೆ.

ಎಸ್‌ಟಿಪಿ ಉದಾ: 

20 ಲಕ್ಷ ರೂ. ಒಟ್ಟು ಮೊತ್ತವನ್ನು ಒಬ್ಬ ಹೂಡಿಕೆದಾರ ಹೊಂದಿದ್ದಾರೆ. ಆದರೆ, ಮಾರ್ಕೆಟ್ ಅಸ್ಥಿರವಾಗಿರುವುದರಿಂದ ಈಕ್ವಿಟಿ ಫಂಡ್‌ನಲ್ಲಿ ಒಟ್ಟಾರೆ ಹೂಡಿಕೆ ಮಾಡಲು ಬಯಸುವುದಿಲ್ಲ. ಹೀಗಾಗಿ, ಆತ/ಆಕೆ ಇಡೀ ಇಪ್ಪತ್ತು ಲಕ್ಷವನ್ನು ಅಲ್ಪಾವಧಿ ಡೆಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. ಇದು ಸಾಮಾನ್ಯವಾಗಿ ಕಡಿಮೆ ಅಸ್ಥಿರವಾಗಿರುತ್ತದೆ. ನಂತರ, ಆ ಫಂಡ್‌ಗೆ ಎಸ್‌ಟಿಪಿ ಸೆಟಪ್ ಮಾಡುತ್ತಾರೆ. ಇದರಲ್ಲಿ ಅವರ ಡೆಟ್‌ ಫಂಡ್‌ನಿಂದ ಹಣವು ಅವರು ಆಯ್ಕೆ ಮಾಡಿದ ಈಕ್ವಿಟಿ ಫಂಡ್‌ಗೆ ನಿರ್ದಿಷ್ಟ ಸಮಯಕ್ಕೆ ವರ್ಗಾವಣೆಯಾಗುತ್ತಿರುತ್ತದೆ. 

ಒಂದೇ ಫಂಡ್ ಹೌಸ್‌ನ ಮ್ಯೂಚುವಲ್ ಫಂಡ್ ಸ್ಕೀಮ್‌ಗಳ ಮಧ್ಯೆ ಎಸ್‌ಟಿಪಿಗಳನ್ನು ಸೆಟಪ್ ಮಾಡಬಹುದು. ಒಂದು ಫಂಡ್ ಹೌಸ್‌ನಲ್ಲಿನ ಎರಡು ಅಥವಾ ಹೆಚ್ಚು ಸ್ಕೀಮ್‌ಗಳಲ್ಲಿ ಎಸ್‌ಟಿಪಿ ಅನ್ನು ಹೂಡಿಕೆದಾರರು ಸೆಟಪ್ ಮಾಡಬಹುದು. ಒಟ್ಟು ಮೊತ್ತ ಹೂಡಿಕೆ ಮಾಡಿದ ಡೆಟ್ ಫಂಡ್‌ನಲ್ಲಿ ಎಕ್ಸಿಟ್ ಲೋಡ್ ಇದೆಯೇ ಎಂದು ಹೂಡಿಕೆದಾರರು ನೋಡಿಕೊಳ್ಳಬೇಕು.
 
ಹಕ್ಕು ನಿರಾಕರಣೆ

 ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.
 

282

ಮ್ಯೂಚುವಲ್‌ ಫಂಡ್‌ ಸೂಕ್ತವೇ??